ಆರೋನಿಯನ್‍ಗೆ ಪ್ರಶಸ್ತಿ
ಗೆಲುವಿನ ಹಾದಿ ಕಾಣದೆ ನಿರಾಸೆ ಅನುಭವಿಸಿದ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಸಿಂಕ್ಯೂಫೀಲ್ಡ್ ಕಪ್ ಚೆಸ್ ಟೂರ್ನಿಯಲ್ಲಿ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಇನ್ನು ಅರ್ಮೇನಿಯಾದ ಲೆವೊನ್ ಅರೋನಿಯನ್ ಅಗ್ರಸ್ಥಾನ ಪಡೆದು ಪ್ರಶಸ್ತಿ ಬಾಚಿಕೊಂಡರು...
ನವದೆಹಲಿ: ಗೆಲುವಿನ ಹಾದಿ ಕಾಣದೆ ನಿರಾಸೆ ಅನುಭವಿಸಿದ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಸಿಂಕ್ಯೂಫೀಲ್ಡ್ ಕಪ್ ಚೆಸ್ ಟೂರ್ನಿಯಲ್ಲಿ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಇನ್ನು ಅರ್ಮೇನಿಯಾದ ಲೆವೊನ್ ಅರೋನಿಯನ್ ಅಗ್ರಸ್ಥಾನ ಪಡೆದು ಪ್ರಶಸ್ತಿ ಬಾಚಿಕೊಂಡರು.
ಆನಂದ್ ಅಂತಿಮ ಸುತ್ತಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‍ಸನ್ ವಿರುದ್ಧ ಡ್ರಾ ಸಾಧಿಸಲಷ್ಟೇ ಶಕ್ತರಾದರು. ಈ ಮೂಲಕ ಟೂರ್ನಿಯ ಆರಂಭಿಕ ಎರಡು ಸುತ್ತಿನಲ್ಲಿ ಸೋಲನುಭವಿಸಿದ್ದ ಆನಂದ್, ನಂತರ ಸತತ 7 ಪಂದ್ಯಗಳಲ್ಲಿ ಡ್ರಾ ಸಾಧಿಸಿದರು. ಇನ್ನು ಅಗ್ರಸ್ಥಾನ ಪಡೆದ ಅರೋನಿಯನ್ ಅಂತಿಮ ಪಂದ್ಯದಲ್ಲಿ ಬೇಕಿದ್ದ ಡ್ರಾ ಫಲಿತಾಂಶವನ್ನು ಪ್ರತಿಸ್ಪರ್ಧಿ ವೆಸೆಲಿನ್ ಪೊಪಲೊವ್ ವಿರುದ್ಧ ಯಶಸ್ವಿಯಾದರು.