ಬಾಕ್ಸರ್ ಸತೀಶ್ ಕುಮಾರ್ (ಸಂಗ್ರಹಚಿತ್ರ) 
ಕ್ರೀಡೆ

ನಾಲ್ಕರ ಘಟ್ಟಕ್ಕೆ ಸತೀಶ್ ಕುಮಾರ್

ಭಾರತದ ಬಾಕ್ಸರ್ ಸತೀಶ್ ಕುಮಾರ್ ಉತ್ತಮ ಪ್ರದರ್ಶನ ನೀಡುವ ಮೂಲಕ ಏಷ್ಯನ್ ಚಾಂಪಿಯನ್‍ಶಿಪ್‍ನ ಸೆಮಿಫೆೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...

ಬ್ಯಾಂಕಾಕ್: ಭಾರತದ ಬಾಕ್ಸರ್ ಸತೀಶ್ ಕುಮಾರ್ ಉತ್ತಮ ಪ್ರದರ್ಶನ ನೀಡುವ ಮೂಲಕ ಏಷ್ಯನ್ ಚಾಂಪಿಯನ್‍ಶಿಪ್‍ನ ಸೆಮಿಫೆೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.

ಇದರೊಂದಿಗೆ ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಬುಧವಾರ ನಡೆದ ಪುರುಷರ 91+ ಕೆ.ಜಿ ವಿಭಾಗದ ಕ್ವಾರ್ಟರ್ಫೆೈನಲ್ ಪಂದ್ಯದಲ್ಲಿ ಸತೀಶ್ ಕುಮಾರ್, ತಮ್ಮ   ಪ್ರತಿಸ್ಪರ್ಧಿ ತಜಕಿಸ್ತಾನದ ಸಿಯೋವುಶ್ ಜುಖುರೋವ್ ಅವರನ್ನು ಮಣಿಸುವ ಮೂಲಕ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿದರು. ಸೆಮಿಫೆೈನಲ್ ತಲುಪುವುದರೊಂದಿಗೆ ಅವರು ಪದಕವನ್ನೂ ಖಚಿತಪಡಿಸಿಕೊಂಡಿದ್ದಾರೆ. ಇನ್ನು 52 ಕೆ.ಜಿ ವಿಭಾಗದಲ್ಲಿ ಮದನ್ ಲಾಲ್ ಹಾಗೂ 81 ಕೆ.ಜಿ ವಿಭಾಗದಲ್ಲಿ ಕುಲ್ದೀಪ್ ಸಿಂಗ್ ತಮ್ಮ ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ನಿರಾಸೆ  ಅನುಭವಿಸಿದರು.

ಭಾರತೀಯ ಆಟಗಾರನ ಆಕ್ರಮಣಕಾರಿ ಆಟದವನ್ನು ಎದುರಿಸಲಾಗದೇ ಸಿಯೋವುಶ್ ನಿಗದಿಗಿಂತ ಹೆಚ್ಚು ಬಾಗುತ್ತಿದ್ದರಿಂದ ಅಂಪೈರ್ ಗಳು ಎರಡು ಬಾರಿ ಎಚ್ಚರಿಕೆ ನೀಡಿದರು. ಅಂತಿಮವಾಗಿ  ಸತೀಶ್ ಕುಮಾರ್ ಅವರನ್ನು ತಾಂತ್ರಿಕ ಆಧಾರದ ಮೇಲೆ ಜಯಶಾಲಿ ಎಂದು ಘೋಷಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT