ಕ್ರೀಡೆ

38 ವರ್ಷ ಬಳಿಕ ಭಾರತಕ್ಕೆ ಬರಲಿರುವ ವಿಶ್ವ ಫುಟ್ಬಾಲ್ ದಂತಕತೆ ಪೀಲೆ

Vishwanath S

ಕೋಲ್ಕತಾ: ಬ್ರೆಜಿಲ್ ನ ಪ್ರಚಂಡ ಫುಟ್ಬಾಲ್ ಆಟಗಾರ, ವಿಶ್ವ ಫುಟ್ಬಾಲ್ ರಂಗದ ಜೀವಂತ ದಂತಕತೆ ಪೀಲೆ 38 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸುವುದು ನಿಶ್ಚಯವಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ 56ನೇ ಸುಬ್ರತೊ ಕಪ್ ಶಾಲಾ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಗೆ ಸಾಕ್ಷಿಯಾಗಲು ಪೀಲೆ ಉತ್ಸುಕವಾಗಿದ್ದಾರೆ ಎಂದು ಹೇಳಲಾಗಿದೆ.

ಏಳು ವಿದೇಶಿ ತಂಡಗಳು ಸೇರಿದಂತೆ ಒಟ್ಟಾರೆ ಈ ಟೂರ್ನಿಯಲ್ಲಿ 100 ಶಾಲಾ ತಂಡಗಳು ಭಾಗವಹಿಸುತ್ತಿರುವ ಪಂದ್ಯಾವಳಿಯ ಫೈನಲ್ ವೀಕ್ಷಿಸಲು 74 ವರ್ಷದ ಪೀಲೆ ಅವರನ್ನು ಕೋರಲಾಗಿತ್ತು. ಸಂಘಟಕರ ಮನವಿಯನ್ನು ಪೀಲೆ ಪುರಸ್ಕರಿಸಿದ್ದಾರೆ ಎಂದು ಗೊತ್ತಾಗಿದೆ. ಅಂದ್ಹಾಗೆ ಈ ಹಿಂದೆ 1977ರಲ್ಲಿ ಪೀಲೆ ಕೋಲ್ಕತಾಗೆ ಭೇಟಿ ಇತ್ತಿದ್ದರು.

SCROLL FOR NEXT