ನವದೆಹಲಿ: ಹವ್ಯಾಸಿ ಬಾಕ್ಸಿಂಗ್‍ಗೆ ವಿದಾಯ ಹೇಳಿ ವೃತ್ತಿಪರ ಬಾಕ್ಸಿಂಗ್ ಕಡೆಗೆ ವಾಲಿರುವ ಬಾಕ್ಸರ್ ವಿಜೇಂದರ್ ಸಿಂಗ್, ಅಕ್ಟೋಬರ್ 10ರಂದು ಇದೇ ಮೊಟ್ಟ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.
ಈ ವಿಚಾರವನ್ನು ಅವರು ತರಬೇತಿ ಪಡೆಯುತ್ತಿರುವ ಲಂಡನ್‍ನ ಕ್ವೀನ್ಸ್‍ಬೆರ್ರಿ ಬಾಕ್ಸಿಂಗ್ ತರಬೇತಿ ಸಂಸ್ಥೆ ಪ್ರಕಟಿಸಿದೆ. ಮುಂದಿನ ತಿಂಗಳು ನಡೆಯಲಿರುವ ಹೆವಿ ವೇಟ್ ಚಾಂಪಿಯನ್‍ಶಿಪ್‍ನಲ್ಲಿ ವಿಜೇಂದರ್ ಭಾಗವಹಿಸಿದ್ದಾರೆ. ಆದರೆ, ಅವರ ಎದುರಾಳಿ ಯಾರು ಎಂಬುದು ಇನ್ನೂ ದೃಢಪಟ್ಟಿಲ್ಲ. ಟೂರ್ನಿಯಲ್ಲಿ ಅವರು, ಗೆನಡಿ, ಮಿಗುಲ್ ಕೊಟ್ಟೊ, ಆ್ಯಂಡಿ ಲೀ, ಬಿಲ್ಲಿ ಜೊರಂಥ ಸ್ಟಾರ್ ಕ್ರೀಡಾಳುಗಳ ಜತೆ ಕಣಕ್ಕಿಳಿಯಲಿದ್ದಾರೆ ಎಂದು ಸಂಸ್ಥೆ ಹೇಳಿದೆ.