ಕ್ರೀಡೆ

ಟಸ್ಕರ್ಸ್‍ಗೆ ಸುಲಭ ಜಯ

Srinivasamurthy VN

ಹುಬ್ಬಳ್ಳಿ: ಗುರುವಾರ ಮಳೆಯಿಂದಾಗಿ 14 ಓವರ್ ಗಳಿಗೆ ಸೀಮಿತವಾದ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ ರಾಕ್‍ಸ್ಟಾರ್ಸ್ ವಿರುದ್ಧ 10 ವಿಕೆಟ್‍ಗಳ ಗೆಲವು ಸಂಪಾದಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಕ್‍ಸ್ಟಾರ್ಸ್ 12.5 ಓವರ್‍ ಗಳಲ್ಲಿ 78 ರನ್‍ಗಳಿಗೆ ಆಲೌಟ್ ಆಯಿತು. ಈ ಮೊತ್ತ ಬೆನ್ನಟ್ಟಿದ ಟಸ್ಕರ್ಸ್ 7.3 ಓವರ್‍ ಗಳಲ್ಲಿ ವಿಕೆಟ್  ನಷ್ಟವಿಲ್ಲದೇ 84 ರನ್ ದಾಖಲಿಸಿತು.

ಟೈಗರ್ಸ್ ಪಂದ್ಯರದ್ದು
ಟೂರ್ನಿಯ ಹುಬ್ಬಳ್ಳಿ ಟೈಗರ್ಸ್ ಮತ್ತು ಮಂಗಳೂರು ಯುನೈಟೆಡ್ ತಂಡಗಳ ನಡುವಣದ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ನಿಂತಿತು. ಆಗ ಮಂಗಳೂರು ತಂಡ 15 ಓವರ್ ನಲ್ಲಿ 3  ವಿಕೆಟ್‍ಗೆ 125 ರನ್ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್
ರಾಕ್‍ಸ್ಟಾರ್ಸ್ 12.5 ಓವರ್‍ ಗಳಲ್ಲಿ 78
(ರಾಜೀವ್ 33, ಅಮಿತ್ 5ಕ್ಕೆ 4); ಟಸ್ಕರ್ಸ್ 7.3 ಓವರ್‍ ಗಳಲ್ಲಿ 84 (ಪವನ್ ಅಜೇಯ 40, ಭರತ್ ಚಿಪ್ಲಿ
ಅಜೇಯ 43) ಪಂದ್ಯಶ್ರೇಷ್ಠ: ಅಮಿತ್

SCROLL FOR NEXT