ಬೆಂಗಳೂರು: ಕರ್ನಾಟಕದ ಮಾಜಿ ಟೇಬಲ್ ಟೆನಿಸ್ ಆಟಗಾರ ಹಾಗೂ ಕರ್ನಾಟಕ ಟೇಬಲ್ ಟೆನಿಸ್ ಸಂಸ್ಥೆ (ಕೆಟಿಟಿಎ) ಮಾಜಿ ಅಧ್ಯಕ್ಷ ಕೆ.ಎನ್. ಶಂಕರನ್ (79) ನಿಧನರಾಗಿದ್ದಾರೆ.
ಇವರ ನಿಧನಕ್ಕೆ ಕೆಟಿಟಿಎ ಸಂತಾಪ ಸೂಚಿಸಿದೆ. ಶಂಕರನ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಸೇವೆ ಸಲ್ಲಿಸಿದ್ದರು. 1969ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಬಾರ್ನಾ ಬೆಲ್ಲೆಕ್ ಕಪ್ ಗೆದ್ದ ರಾಷ್ಟ್ರೀಯ ಪುರುಷರ ಟಿಟಿ ಚಾಂಪಿಯನ್ ತಂಡದ ಸದಸ್ಯರಾಗಿದ್ದರು. ಪುತ್ರ ಹಾಗೂ ಪುತ್ರಿಯನ್ನು ಅವರು ಅಗಲಿದ್ದಾರೆ.