ಉಡುಪಿ: ಖ್ಯಾತ ಅತ್ಲೀಟ್‍ಗಳಾದ ಅಶ್ವಿನಿ ಅಕ್ಕುಂಜಿ ಮತ್ತು ಅಭಿಜಿತ್ ರೈ ಅವರ ವಿವಾಹದ ನಿಶ್ಚಿತಾರ್ಥ ಸಮಾರಂಭ ಗುರುವಾರ ಇಲ್ಲಿನ ಶಾರದಾ ಇಂಟರ್‍ನ್ಯಾಶನಲ್ ಹೋಟೆಲಿನಲ್ಲಿ ನಡೆಯಿತು.
ಅಂತಾರಾಷ್ಟ್ರೀಯ ಮಟ್ಟದ ಓಟಗಾರ್ತಿ ಅಶ್ವಿನಿ ಅಕ್ಕುಂಜೆ ಅವರು ರಾಷ್ಟ್ರೀಯ ಮಟ್ಟದ ಶಾಟ್‍ಪುಟ್ ಎಸೆತಗಾರ ಮಂಗಳೂರಿನ ಅಭಿಜಿತ್ ರೈ ಅವರನ್ನು ವರಿಸಲಿದ್ದಾರೆ. ಇಬ್ಬರೂ ತಮ್ಮ ಕುಟುಂಬ ಸದಸ್ಯರು, ಸಂಬಂಧಿಕರ ಸಮ್ಮುಖದಲ್ಲಿ ಗುರುವಾರ ಉಂಗುರ ವಿನಿಮಯ ಮಾಡಿಕೊಂಡರು. ಮದುವೆ 2016ರ ಆಗಸ್ಟ್ ನಂತರ ನಡೆಯಲಿದೆ. ಅಶ್ವಿನಿ ಅವರು 2011ರಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 4x100ಮೀಟರ್ ರಿಲೇ, ಏಶ್ಯನ್ ಗೇಮ್ಸ್ ರಿಲೇಯಲ್ಲಿ ಚಿನ್ನ, 400 ಮೀಟರ್ ಹರ್ಡಲ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದು, 2016ರ ರಿಯೋ ಒಲಿಂಪಿಕ್ಸ್ ಗಾಗಿ ಪಾಟಿಯಾಲದಲ್ಲಿ ತೀವ್ರ ಅಭ್ಯಾಸ ನಿರತರಾಗಿದ್ದಾರೆ ಅಶ್ವಿನಿ.