ದಿ ರಾಕ್ 
ಕ್ರೀಡೆ

ದಿ ರಾಕ್ ಕಣ್ಣೀರು ಹಾಕಿದ್ದು ಏಕೆ ಗೊತ್ತಾ?

ದಿ ರಾಕ್! ಡಬ್ಲ್ಯುಡಬ್ಲ್ಯುಇ ಫೈಟಿಂಗ್‍ನಲ್ಲಿ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಯಾವತ್ತು ಅತ್ತಿದ್ದಾನೆ ಹೇಳಿ? ಟ್ರಿಪಲ್ ಎಚ್, ಬಿಗ್‍ಶೋ, ಅಂಡರ್‍ಟೇಕರ್ ಎದುರಿನ ಭೀಕರ ಕುಸ್ತಿಯಲ್ಲೂ ಈತ ಅತ್ತವನಲ್ಲ...

ದಿ ರಾಕ್! ಡಬ್ಲ್ಯುಡಬ್ಲ್ಯುಇ ಫೈಟಿಂಗ್‍ನಲ್ಲಿ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಯಾವತ್ತು ಅತ್ತಿದ್ದಾನೆ ಹೇಳಿ? ಟ್ರಿಪಲ್ ಎಚ್, ಬಿಗ್‍ಶೋ, ಅಂಡರ್‍ಟೇಕರ್ ಎದುರಿನ ಭೀಕರ ಕುಸ್ತಿಯಲ್ಲೂ ಈತ ಅತ್ತವನಲ್ಲ. 
ಆದರೆ, ನಿನ್ನೆ ಈ ಕಲ್ಲುಬಂಡೆ ಕರಗಿತ್ತು. ಕರಗಿ ಕಣ್ಣೀರಾಗಿತ್ತು. ಕಾರಣ, ರಾಕ್‍ನ ಪ್ರೀತಿಯ ನಾಯಿಮರಿ `ಬ್ರುಟೂಸ್' ಇಹಲೋಕವನ್ನೇ ತ್ಯಜಿಸಿದ್ದು. ಲಾಸ್ ಏಂಜಲೀಸ್‍ನ ಈತನ ಮನೆಯ ಗಾರ್ಡನ್‍ನಲ್ಲಿ ಮಶ್ರೂಮ್ (ಅಣಬೆ) ಬೆಳೆಯಲಾಗಿತ್ತಂತೆ. ಈ ಮಶ್ರೂಮನ್ನು ನಾಯಿಮರಿ ತಿಂದ ಒಂದೇ ಗಂಟೆಯಲ್ಲಿ ಅಸುನೀಗಿದೆ. ಕೆಲವೇ ತಿಂಗಳ ಹಿಂದಷ್ಟೇ ರಾಕ್ ಈ ಮರಿಯನ್ನು ಖರೀದಿಸಿದ್ದರು. 
ಒಂದೆರಡು ವಾರಗಳ ಕೆಳಗೆ ರಾಕ್‍ನ ಮನೆಯ ಸ್ವಿಮ್ಮಿಂಗ್‍ಪೂಲ್‍ಗೆ ಬ್ರೂಟಸ್ ಮತ್ತು ಇನ್ನೊಂದು ನಾಯಿಮರಿ ಹಾಬ್ಸ್ ಬಿದ್ದು, ಪ್ರಾಣ ಉಳಿಸಿಕೊಳ್ಳಲು ಹೋರಾಡಿದ್ದವಂತೆ. ರಾಕ್ ಕೂಡಲೇ ಬಂದು ಜೀವ ಉಳಿಸಿದ್ದರು. 'ಪ್ರೀತಿಪಾತ್ರರನ್ನು ಇವತ್ತೇ ಪ್ರೀತಿಸಿ. ಯಾಕೆಂದರೆ ನಾಳೆ ಇರೋದಿಲ್ಲ' ಎಂದು ರಾಕ್ ದುಃಖದಲ್ಲಿ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬೆಂಜಮಿನ್ ನೆತನ್ಯಾಹು ಮಾಡಿದ ಫೋನ್ ಕರೆಯೇ ಅಮೆರಿಕ-ಇರಾನ್ ಶಾಂತಿ ಮಾತುಕತೆ ಹಳಿತಪ್ಪುವಂತೆ ಮಾಡಿತು'

ಕ್ಷೇತ್ರಗಳ ಮರುವಿಂಗಡಣೆ ಪ್ರಸ್ತಾಪ ಅತ್ಯಂತ ಅಪಾಯಕಾರಿ ಹಾಗೂ ಸಂವಿಧಾನದ ಮೇಲಿನ ದಾಳಿ: ಸೋನಿಯಾ ಗಾಂಧಿ

ರಾಜ್ಯದಲ್ಲಿ ರಣ ಬಿಸಿಲು: 35 ಡಿಗ್ರಿ ತಲುಪಿದ ತಾಪಮಾನ, ಮಳೆ ಮುನ್ಸೂಚನೆ ಇಲ್ಲ ಎಂದ IMD

ಆಗ VOLVO, ಈಗ BMW; ಹಾರುಬೂದಿ ಸಾಗಿಸುತ್ತಿದ್ದ ಲಾರಿ ಉರುಳಿ ಐಶಾರಾಮಿ ಕಾರು ಅಪ್ಪಚ್ಚಿ, Video

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

SCROLL FOR NEXT