ಶತಮಾನದ ಫೈಟ್ ನಲ್ಲಿ ವಿಶ್ವ ದಿಗ್ಗಜ ಬಾಕ್ಸರ್ ಫ್ಲಾಯ್ಡ್ ಮೇವೆದರ್ ವಿರುದ್ಧ ಸೋತ ಏಷ್ಯಾದ ಬಲಿಷ್ಠ ಬಾಕ್ಸರ್ ಮ್ಯಾನಿ ಪಾಕ್ವಿಯೋ ತಮ್ಮ ವಿದಾಯದ ಪಂದ್ಯದಲ್ಲಿ ಕ್ಯಾಲಿಫೋರ್ನಿಯಾದ ಟಿಮೋಥಿ ಬ್ರಾಡ್ಲಿ ವಿರದ್ಧ ಭರ್ಜರಿ ಗೆಲವು ಸಾಧಿಸಿದ್ದಾರೆ.
37 ವರ್ಷದ ಪಾಕ್ವಿಯೋ ಎಂಜಿಎಂ ಗ್ರಾಂಡ್ ಗಾರ್ಡನ್ ಅರೇನಾದಲ್ಲಿ ನಡೆದ ಬಾಕ್ಸಿಂಗ್ ನಲ್ಲಿ 116 ಅಂಕಗಳೊಂದಿಗೆ ಬ್ರಾಡ್ಲಿನ್ ರನ್ನ ಸೋಲಿಸಿ ತಮ್ಮ 21 ವರ್ಷದ ವೃತ್ತಿಪರ ಬಾಕ್ಸಿಂಗ್ ಜೀವನವನ್ನು ಕೊನೆಗೊಳಿಸಿದ್ದಾರೆ.
ಪಂದ್ಯದ ವೇಳೆ ಪಾಕ್ವಿಯೋ ಒಟ್ಟು 33 ಬಲಿಷ್ಠ ಪಂಚ್ ಗಳನ್ನು ನೀಡಿದರೆ, ಬ್ರಾಡ್ಲಿ ಕೇವಲ 19 ಪಂಚ್ ಗಳನ್ನು ಮಾತ್ರ ನೀಡಿದರು. ಇದರೊಂದಿಗೆ ಬ್ಲಾಡ್ಲಿ ವೃತ್ತಿಜೀವನದಲ್ಲಿ ಪಾಕ್ವಿಯೋ ವಿರುದ್ಧ ಆಡಿದ ಮೂರನೇ ಫೈಟ್ ನಲ್ಲಿ 2ನೇ ಸೋಲು ಅನುಭವಿಸಿದ್ದಾರೆ.
ವಿದಾಯದೊಂದಿಗೆ ಪಾಕ್ವಿಯೋ ತಮ್ಮ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮುಂದುವರಿಯಲು ಬಯಸಿದ್ದು, ಈ ಮೂಲಕ ಜನ ಸೇವೆ ಮಾಡುವುದಾಗಿ ಹೇಳಿದ್ದಾರೆ.