ಕ್ರೀಡಾ ಸಚಿವ ವಿಜಯ್ ಗೋಯಲ್ ಭಾರತ ಹಾಕಿ ತಂಡದ ಆಟಗಾರರರೊಂದಿಗೆ ನಿನ್ನೆ ರಿಯೊ ಡಿ ಜನೈರೊದಲ್ಲಿ 
ಕ್ರೀಡೆ

ಕ್ರೀಡಾ ಸಚಿವ ವಿಜಯ್ ಗೋಯಲ್ ಮಾನ್ಯತೆ ರದ್ದುಪಡಿಸುವ ಎಚ್ಚರಿಕೆ ನೀಡಿದ ರಿಯೊ ಸಮಿತಿ

ಕ್ರೀಡಾ ಸಚಿವ ವಿಜಯ್ ಗೋಯಲ್ ಅವರ ಬೆಂಬಲಿಗರು ರಿಯೋ ಒಲಂಪಿಕ್ಸ್'ನ ಹಾಕಿ ಕ್ರೀಡಾಂಗಣದ...

ರಿಯೊ ಡಿ ಜನೈರೊ:  ಕ್ರೀಡಾ ಸಚಿವ ವಿಜಯ್ ಗೋಯಲ್ ಅವರ ಬೆಂಬಲಿಗರು ರಿಯೋ ಒಲಂಪಿಕ್ಸ್'ನ ಹಾಕಿ ಕ್ರೀಡಾಂಗಣದ ಕೆಲವು ನಿಷೇಧಿತ ಸ್ಥಳಗಳಿಗೆ ತೆರಳಿದ್ದಲ್ಲದೆ, ಅಲ್ಲಿ ಗೂಂಡಾ ವರ್ತನೆ ತೋರಿದ ಹಿನ್ನೆಲೆಯಲ್ಲಿ, ಆಯೋಜಕರು ಭಾರತದ ಕ್ರೀಡಾ ಸಚಿವರ ಪ್ರವೇಶ ಪತ್ರವನ್ನು ರದ್ದುಗೊಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಕ್ರೀಡಾಂಗಣದ ಭದ್ರತಾ ಸಿಬ್ಬಂದಿಗಳು ಈ ಸ್ಥಳಗಳ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸದೆ ವಿಜಯ್ ಗೋಯಲ್ ಬೆಂಬಲಿಗರು ಗೂಂಡಾ ವರ್ತನೆ ತೋರಿದ್ದಾರೆಂದು ರಿಯೊ ಕೂಟದ ವ್ಯವಸ್ಥಾಪಕಿ ಸಾರಾ ಪೀಟರ್'ಸನ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾರತೀಯ ಕ್ರೀಡಾ ಸಚಿವರ ಪ್ರವೇಶ ಪತ್ರವನ್ನು ರದ್ದುಗೊಳಿಸುವ ಎಚ್ಚರಿಕೆ ರಿಯೋ ಕೂಟದ ವ್ಯವಸ್ಥಾಪಕರು ನೀಡಿದ್ದಾರೆ. 
ವಿಜಯ್ ಗೋಯಲ್, ರಿಯೊದ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ಭಾರತೀಯ ಆಟಗಾರರ ವ್ಯವಸ್ಥೆ ಹಾಗೂ ಅಗತ್ಯಗಳ ಬಗ್ಗೆ ನಿಗಾವಹಿಸಲು ಅಲ್ಲಿಗೆ ತೆರಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!