ಚಿನ್ನ ಗೆದ್ದ ಉಸೇನ್ ಬೋಲ್ಟ್ ಸಂಭ್ರಮ 
ಕ್ರೀಡೆ

"ಜಮೈಕನ್ ಕಿಂಗ್" ಉಸೇನ್ ಬೋಲ್ಟ್ ಗೆ ಮತ್ತೊಂದು ಚಿನ್ನದ ಪದಕ

ಹಾಲಿ ಒಲಿಂಪಿಕ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ 200 ಮೀ. ಓಟದ ಫೈನಲ್ ಹಣಾಹಣಿಯಲ್ಲಿ ಮೊದಲಿಗರಾಗಿ ಗುರಿ ತಲುಪುವ ಮೂಲಕ ಸತತ 3ನೇ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದಿದ್ದಾರೆ.

ರಿಯೋ ಡಿ ಜನೈರೋ: ಹಾಲಿ ಒಲಿಂಪಿಕ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ 200 ಮೀ. ಓಟದ ಫೈನಲ್ ಹಣಾಹಣಿಯಲ್ಲಿ ಮೊದಲಿಗರಾಗಿ ಗುರಿ ತಲುಪುವ ಮೂಲಕ ಸತತ 3ನೇ  ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದಿದ್ದಾರೆ.

ರಿಯೋ ಡಿಜನೈರೋದಲ್ಲಿ ನಡೆದ 200 ಮೀ, ಪುರುಷರ ಓಟದ ಫೈನಲ್ ಸ್ಪರ್ಧೆಯಲ್ಲಿ ಉಸೇನ್ ಬೋಲ್ಟ್ ದಾಖಲೆಯ ಕೇವಲ 19.19 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಸತತ ಮೂರನೇ ಚಿನ್ನದ  ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ 100 ಮತ್ತು 200 ಮೀಟರ್ ಓಟದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸತತ 3ನೇ ಬಾರಿಗೆ ಬಂಗಾರದ ಪದಕ ಗೆದ್ದ ಆಟಗಾರ ಎಂಬ ಖ್ಯಾತಿಗೆ  ಬೋಲ್ಟ್ ಪಾತ್ರರಾಗಿದ್ದಾರೆ.

ಅಲ್ಲದೆ ಈ ಹಿಂದೆ ತಮ್ಮದೇ ಹೆಸರಿಲ್ಲಿದ್ದ 19.78 ಸೆಕೆಂಡ್ ಗಳ ದಾಖಲೆ ಓಟವನ್ನು ಬೋಲ್ಟ್ ಮುರಿದಿದ್ದು, ಕೇವಲ 19.19 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿದ್ದಾರೆ. ಕೆನಡಾದ  ಆ್ಯಂಡ್ರೆ ಡಿ ಗ್ರಾಸ್ಸೆ ಅವರು 20.02 ಸೆಕೆಂಡ್ ಗಳಲ್ಲಿ ಗುರಿಮುಟ್ಟಿ 2 ನೇಸ್ಥಾನ ಪಡೆದ ಬೆಳ್ಳಿ ಪದಕ ಪಡೆದರೆ, ಫ್ರಾನ್ಸ್ ನ ಕ್ರಿಸ್ಟೋಫ್ ಲೆಮೈಟ್ರೆ ಅವರು 20.12 ಸೆಕೆಂಡ್ ಗಳಲ್ಲಿ ಗುರಿಮುಟ್ಟಿ ಕಂಚಿನ  ಪದಕ ಪಡೆದಿದ್ದಾರೆ.

ಈ ಹಿಂದೆ ಸೋಮವಾರ ನಡೆದಿದ್ದ 100 ಮೀಟರ್ ಸ್ಪರ್ಧೆಯಲ್ಲೂ ಬೋಲ್ಟ್ ಗೆ ಪೈಪೋಟಿ ನೀಡಿದ್ದ ಕೆನಡಾದ ಆ್ಯಂಡ್ರೆ ಡಿ ಗ್ರಾಸ್ಸೆ ಅವರು ಕಂಚಿನ ಪದಕ ಪಡೆದಿದ್ದರು.

ನನಸಾಗುವತ್ತ ಬೋಲ್ಟ್ ತ್ರಿವಳಿ-ತ್ರಿವಳಿ ಕನಸು
ಈ ಹಿಂದೆ 100, 200 ಮತ್ತು 4*100 ಮೀಟರ್ ಓಟದಲ್ಲಿ ಸತತ 2 ಬಾರಿ ಚಿನ್ನದ ಪದಕ ಗೆದ್ದು ವಿಶ್ವದಾಖಲೆ ನಿರ್ಮಿಸಿದ್ದ ಬೋಲ್ಟ್, ಈ ಬಾರಿಯೂ ಅದೇ ಸಾಧನೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.  ಈಗಾಗಲೇ 100 ಮತ್ತು 200 ಮೀಟರ್ ಓಟದಲ್ಲಿ ಚಿನ್ನಗೆದ್ದಿರುವ ಬೋಲ್ಟ್  4*100 ಮೀಟರ್ ಓಟದ ಸ್ಪರ್ಧೆಯಲ್ಲಿಯೂ ಚಿನ್ನೆ ಗೆದ್ದರೆ ಅಭೂತಪೂರ್ವ ದಾಖಲೆಯೊಂದು ನಿರ್ಮಾಣವಾಗಲಿದೆ.  ಒಲಿಂಪಿಕ್ಸ್ 3 ಬಗೆಯ ಓಟದಲ್ಲಿ ಸತತ 3ನೇ ಬಾರಿಗೆ ಚಿನ್ನ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT