ಪಿವಿ ಸಿಂಧೂ ಹಾಗೂ ಬಿರಿಯಾನಿ, ಮೈಸೂರುಪಾಕ್ (ಸಂಗ್ರಹ ಚಿತ್ರ) 
ಕ್ರೀಡೆ

"ಬೆಳ್ಳಿ"ತಾರೆ ಪಿವಿ ಸಿಂಧುಗಾಗಿ ಬಿರಿಯಾನಿ, ಮೈಸೂರು ಪಾಕ್ ಸಿದ್ಧ ಪಡಿಸಿದ ತಾಯಿ

ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ತವರಿಗೆ ವಾಪಸ್ ಆಗಿರುವ "ಬೆಳ್ಳಿ"ತಾರೆ ಪಿವಿ ಸಿಂಧುಗಾಗಿ ಅವರ ತಾಯಿ ವಿಜಯ ಅವರು ಸ್ಪೆಷಲ್ ಬಿರಿಯಾನಿ ಹಾಗೂ ಮೈಸೂರು ಪಾಕ್ ಸಿದ್ಧಪಡಿಸಿದ್ದಾರಂತೆ.

ಹೈದರಾಬಾದ್: ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ತವರಿಗೆ ವಾಪಸ್ ಆಗಿರುವ "ಬೆಳ್ಳಿ"ತಾರೆ ಪಿವಿ ಸಿಂಧುಗಾಗಿ ಅವರ ತಾಯಿ ವಿಜಯ ಅವರು ಸ್ಪೆಷಲ್ ಬಿರಿಯಾನಿ ಹಾಗೂ ಮೈಸೂರು  ಪಾಕ್ ಸಿದ್ಧಪಡಿಸಿದ್ದಾರಂತೆ.

ಕೋಚ್ ಪುಲ್ಲೆಲ ಗೋಪಿಚಂದ್ ಆಜ್ಞೆ ಮೇರೆಗೆ ಒಲಿಂಪಿಕ್ಸ್ ಗಾಗಿ ಕಳೆದ ನಾಲ್ಕು ತಿಂಗಳಿನಿಂದ ಕಠಿಣ ಡಯಟ್ ನಲ್ಲಿದ್ದ ಪಿವಿ ಸಿಂಧು ಅವರು ಇಂದು ತಮ್ಮ ಡಯಟ್ ಅನ್ನು ಮುರಿಯಲಿದ್ದು, ಕೋಚ್  ಗೋಪಿಚಂದ್ ರೊಂದಿಗೆ ಔತಣಕೂಟದಲ್ಲಿ ಭಾಗಿಯಾಗಿ ತಮಗಿಷ್ಟದ ತಿನಿಸುಗಳನ್ನು ಸವಿಯಲಿದ್ದಾರೆ. ಪದಕ ವಿಜೇತ ಪುತ್ರಿ ಸಿಂಧುಗಾಗಿ ಅವರ ತಾಯಿ ವಿಜಯ ಅವರು ಹಲವು ತಿನಿಸುಗಳನ್ನು  ತಯಾರಿಸಿದ್ದು, ವಿಶೇಷವಾಗಿ ಹೈದರಾಬಾದ್ ಸ್ಪೆಷಲ್ ಬಿರಿಯಾನಿ ಹಾಗೂ ಮೈಸೂರು ಪಾಕ್ ಸಿದ್ಧಪಡಿಸಿದ್ದಾರಂತೆ.

ಇಂದು ಸಂಜೆ ಸಿಂಧು ಅವರ ಹೈದರಾಬಾದ್ ನ ಕೋಕಾಪೇಟಾ ನಿವಾಸದಲ್ಲಿ ನಡೆಯಲಿರುವ ಔತಣಕೂಟದಲ್ಲಿ ಕೋಚ್ ಗೋಪಿಚಂದ್ ಸೇರಿದಂತೆ ಸಿಂಧುರೊಂದಿಗೆ ರಿಯೋ ಗೆ ತೆರಳಿದ್ದ ಕ್ರೀಡಾ  ಇಲಾಖೆಯ ಸಹ ಅಧಿಕಾರಿಗಳು ಪಾಲ್ಗೊಳ್ಳಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!