ಲಂಡನ್: ರಿಯೋ ಒಲಿಂಪಿಕ್ಸ್ ವೇಳೆ ಉಸೇನ್ ಬೋಲ್ಟ್ ವಿದ್ಯಾರ್ಥಿನಿಯೊಂದಿಗೆ ಹಾಸಿಗೆ ಹಂಚಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡಿದ್ದವು. ಇದೀಗ ಅವರ ಮತ್ತೊಂದು ಸಾಹಸ ಹೊರಬಂದಿದೆ.
ರಿಯೋ ಒಲಿಂಪಿಕ್ಸ್ ವೇಗದ ಓಟದಲ್ಲಿ ಮೂರು ಚಿನ್ನದ ಪದಕ ಗೆದ್ದಿದ್ದ ಉಸೇನ್ ಬೋಲ್ಟ್ ಲಂಡನ್ ನ ಹೊಟೇಲ್ ಒಂದರಲ್ಲಿ ಸುಂದರ ಯುವತಿಯರಿಗಾಗಿ ಅಣುಕು ಒಲಿಂಪಿಕ್ಸ್ ನಡೆಸಿ ಆನ್ ಲೈನ್ ನಲ್ಲಿ ಭಾರೀ ಸುದ್ದಿಯಾಗಿದ್ದಾರೆ.
ರಾತ್ರಿಯಲ್ಲಾ ಪಾರ್ಟಿ ನಡೆದಿದ್ದು ಈ ವೇಳೆ ತಮಾಷೆ ಹಾಗೂ ಮೋಜಿನ ಆಟಗಳು ನಡೆದಿವೆ. ರಿಯೋ ಒಲಿಂಪಿಕ್ಸ್ ನಲ್ಲಿ ಗೆದ್ದಿದ್ದ ಮೂರು ಚಿನ್ನದ ಪದಕಗಳನ್ನು ಹೊರ ತೆಗೆದ ಬೋಲ್ಟ್ ಅದನ್ನು ಟೇಬಲ್ ಮೇಲೆ ಇಟ್ಟಿದ್ದಾರೆ. ಈ ವೇಳೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಯುವತಿಯರು ತಮ್ಮ ಸ್ತನದ ಗಾತ್ರವನ್ನು ಪ್ರದರ್ಶಿಸಿದರಂತೆ. ಕೊನೆಗೆ ಯಾರನ್ನೂ ವಿಜೇತರು ಎಂದು ನಿರ್ಧರಿಸದ ಬೋಲ್ಟ್ ಎಲ್ಲ ಯುವತಿಯರು ಚಿನ್ನ ಎನ್ನುವ ಮೂಲಕ ಅಣುಕು ಒಲಿಂಪಿಕ್ಸ್ ಗೆ ಮುಕ್ತಾಯ ಹಾಡಿದ್ದಾರೆ.