ಕ್ರೀಡೆ

ಆಸೀಸ್ ವಿರುದ್ಧ ಸರಣಿ ಗೆಲ್ಲುವ ಮೂಲಕ ಮೆಕಲಮ್‌ಗೆ ಹೃದಯಸ್ಪರ್ಶಿ ವಿದಾಯ

Vishwanath S

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಗೆಲುವಿನೊಂದಿಗೆ ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸ್ ಮನ್ ಬ್ರೆಂಡಾನ್ ಮೆಕಲಮ್ ಗೆ ಹೃದಯ ಸ್ಪರ್ಶಿ ಬೀಳ್ಕೋಡುಗೆ ನೀಡಲಾಗಿದೆ.

ಇಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯ ಬ್ರೆಂಡಾನ್ ಮೆಕಲಮ್ ರ ವಿದಾಯದ ಪಂದ್ಯವಾಗಿತ್ತು. ಮೆಕಲಮ್ ತಮ್ಮ ಕೊನೆಯ ಪಂದ್ಯದಲ್ಲಿ ಕೇವಲ 27 ಎಸೆತಗಳಲ್ಲಿ 47 ರನ್ ಸಿಡಿಸಿದರು. ಮೆಕಲಮ್ ಬ್ಯಾಟ್'ನಿಂದ 3 ಸಿಕ್ಸರ್, 6 ಬೌಂಡರಿ ಬಂದವು. ಏಕದಿನ ಕ್ರಿಕೆಟ್'ನಲ್ಲಿ 200 ಸಿಕ್ಸರ್ ಸಿಡಿಸಿದ ಗೌರವ ಕೂಡ ಅವರದ್ದಾಗಿದೆ.

2004 ರಲ್ಲಿ ವಿಕೆಟ್ ಕೀಪರ್, ಬ್ಯಾಟ್ಸಮನ್ ಆಗಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಬಳಿಕ ನಾಯಕನಾಗಿ ತಂಡ ಮುನ್ನಡೆಸಿದ ಕೀರ್ತಿ ಮೆಕ್ಕಲಮ್ ಅವರದ್ದಾಗಿದೆ. ಮೆಕ್ಕಲಮ್ ಅಡಿರುವ 99 ಟೆಸ್ಟ್ ಪಂದ್ಯಗಳಿಂದ 6,273 ರನ್ ಗಳಿಸಿದ್ದಾರೆ. 11 ಶತಕ ಸಿಡಿಸಿ ಸರಾಸರಿ 38.48 ರಲ್ಲಿ ನ್ಯೂಜಿಲೆಂಡ್ ನಾಯಕರ ವೈಯಕ್ತಿಕ ಸಾಧನೆಯ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಕಳೆದ ವರ್ಷ ವೆಲ್ಲಿಂಗ್ಟನ್​ನಲ್ಲಿ ಭಾರತದ ವಿರುದ್ಧ (302) ತ್ರಿಶತಕ ಸಾಧನೆ ಮಾಡಿದ ನ್ಯೂಜಿಲೆಂಡ್​ನ ಏಕೈಕ ಬ್ಯಾಟ್ಸಮನ್ ಆಗಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 254 ಪಂದ್ಯಗಳನ್ನಾಡಿ 5,909 ರನ್​ಗಳನ್ನು 30.30 ಸರಾಸರಿಯಲ್ಲಿ ಸಂಪಾದಿಸಿದ್ದಾರೆ. ಇನ್ನು 71 ಟ್ವೆಂಟಿ 20 ಪಂದ್ಯಗಳನ್ನಾಡಿ ಸರಾಸರಿ 35.66ನಿಂದ 2,140 ರನ್ ಗಳಿಸಿದ್ದಾರೆ.

SCROLL FOR NEXT