ಮನಿಕಾ ಬಾತ್ರಾ (ಸಂಗ್ರಹ ಚಿತ್ರ) 
ಕ್ರೀಡೆ

ಟಿಟಿ: ಮನಿಕಾ ಬಾತ್ರಾಗೆ ಹ್ಯಾಟ್ರಿಕ್ ಚಿನ್ನ

12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದ ಟೇಬಲ್ ಟೆನಿಲ್ ಮಹಿಳಾ ಡಬಲ್ಸ್​ನಲ್ಲಿ ಮನಿಕಾ ಬಾತ್ರಾ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಸತತ ಮೂರನೇ ಬಾರಿಗೆ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ...

ಶಿಲ್ಲಾಂಗ್: 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದ ಟೇಬಲ್ ಟೆನಿಲ್ ಮಹಿಳಾ ಡಬಲ್ಸ್​ನಲ್ಲಿ ಮನಿಕಾ ಬಾತ್ರಾ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಸತತ ಮೂರನೇ ಬಾರಿಗೆ ಚಿನ್ನದ ಪದಕ ಗೆದ್ದು ಸಾಧನೆ  ಮಾಡಿದ್ದಾರೆ.

ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿರುವ ದೆಹಲಿ ಮೂಲದ ಹುಡುಗಿ ಮನಿಕಾ ಬಾತ್ರಾ ಅವರು ಪೂಜಾ ಸಹಸ್ರಬುದ್ಧೆ ಅವರ ಜೊತೆಗೂಡಿ ಮೌಮಾ ದಾಸ್ ಮತ್ತು ಶಾಮಿನಿ ಜೋಡಿಯನ್ನು ಕೇವಲ 30  ನಿಮಿಷಗಳ ಅಂತರದಲ್ಲಿ 11-7, 13-11, 11-5 ಅಂತರದಲ್ಲಿ ಮಣಿಸಿದರು. ಆ ಮೂಲಕ ಸತತ ಮೂರನೇ ಬಾರಿಗೆ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು.

ಇನ್ನು ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪುರುಷರ ಡಬಲ್ಸ್​ನ ಫೈನಲ್​ನಲ್ಲಿ ಜಿ.ಸತ್ಯನ್ ಮತ್ತು ದೇವೇಶ್ ಕೈರಾ ಅವರು ಆಂತೋಣಿ ಅಮಲ್​ರಾಜ್ ಮತ್ತು ಸನಿಲ್ ಶೆಟ್ಟಿ  ಜೋಡಿಯನ್ನು 11-1, 11-8, 11-6 ಅಂತರಲ್ಲಿ ಸೋಲಿಸಿ ಎರಡನೇ ಚಿನ್ನದ ಪದಕವನ್ನು ಗೆದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

SCROLL FOR NEXT