ಹೈದರಾಬಾದ್: ಸಿಸಿಎಲ್‌ನ 6ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ತೆಲುಗು ವಾರಿಯರ್ಸ್ ತಂಡ ಸೋಲಿಸಿ ಸಿಸಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕದ ಧೃವ ಶರ್ಮಾರ 97ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6ವಿಕೆಟ್ ನಷ್ಟಕ್ಕೆ 207ರನ್ ಬೃಹತ್ ಮೊತ್ತವನ್ನು ಕಲೆ ಹಾಕಿತು.
208 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ತೆಲುಗು ವಾರಿಯರ್ಸ್ ತಂಡ ಸಚಿನ್ ಜೋಷಿ ಹಾಗೂ ಪ್ರಿನ್ಸ್ 171 ರನ್ ಗಳ ಜತೆಯಾಟ ಗೆಲುವಿನ ದಡ ಸೇರಲು ಸಾಧ್ಯವಾಯಿತು.