ಕ್ರೀಡೆ

ಸ್ಟುವರ್ಟ್ ಬಿನ್ನಿ ಆಲ್ ರೌಂಡರ್ ಆಟ: ಕರ್ನಾಟಕಕ್ಕೆ ರೋಚಕ ಜಯ

Vishwanath S

ಕಟಕ್: ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಸೇರಿದಂತೆ ಶ್ರೀನಾಥ್ ಅರವಿಂದ್ ಹಾಗೂ ಕೆ.ಸಿ. ಕಾರಿಯಪ್ಪ ಅವರ ಸಂಘಟಿತ ದಾಳಿಯ ನೆರವಿನಿಂದಾಗಿ, ಭಾನುವಾರ ನಡೆದ ಸಯ್ಯದ್
ಮುಷ್ತಾಕ್ ಅಲಿ ಟೂರ್ನಿಯ ಡಿ ಗುಂಪಿನ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ, ಮುಂಬೈ ವಿರುದ್ಧ 1 ರನ್‍ನ ರೋಚಕ ಗೆಲವು ದಾಖಲಿಸಿತು. ಈ ಮೂಲಕ, ಮೊದಲ ಪಂದ್ಯದಲ್ಲಿ ಸರ್ವೀಸಸ್ ವಿರುದ್ಧದ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿನ ಕಹಿಯಿಂದ ರಾಜ್ಯ ತಂಡ ಹೊರಬಂದಿತು.

ಇಲ್ಲಿನ ಡ್ರೀಮ್ಸ್ ಗ್ರೌಂಡ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ, 20 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತ್ತು. ಆನಂತರ, ತನ್ನ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡ, 20 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 161 ರನ್ ಮೊತ್ತಕ್ಕೆ ಆಲೌಟ್ ಆಯಿತು. ಟಾಸ್ ಗೆದ್ದಿದ್ದ ಮುಂಬೈ ತಂಡದ ಆದಿತ್ಯ ತಾರೆ, ತಾವು ಮೊದಲು ಫೀಲ್ಡಿಂಗ್‍ಗೆ ಇಳಿ ಯುವ ನಿರ್ಧಾರವನ್ನು ಕೈಗೊಂಡರು. ಅದರಂತೆ, ಮೊದಲು ಬ್ಯಾಟಿಂಗ್‍ಗೆ ಇಳಿದ ವಿನಯ್ ಬಳಗ ಆರಂಭಿಕ ಮಯಾಂಕ್ ಅಗರ್ವಾಲ್ ಅವರನ್ನು ಬೇಗನೇ ಕಳೆದು ಕೊಂಡಿತು. ಆದರೆ, 2ನೇ ವಿಕೆಟ್‍ಗೆ 64 ರನ್ ಜತೆಯಾಟ ನೀಡಿದ ಮತ್ತೊಬ್ಬ ಆರಂಭಿಕ ಮೊಹಮ್ಮದ್ ತಾಹ ಹಾಗೂ ಮೂರನೇ ಕ್ರಮಾಂಕದ ರಾಬಿನ್ ಉತ್ತಪ್ಪ, ಈ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದರು. ಆನಂತರದ ಕ್ರಮಾಂಕಗಳಲ್ಲಿ ಆಡಿದ ಕರುಣ್ ನಾಯರ್ (16), ಸ್ಟುವರ್ಟ್ ಬಿನ್ನಿ(38), ಉತ್ತಮ ಕಾಣಿಕೆ ನೀಡಿ ತಂಡವು ಉತ್ತಮ ಮೊತ್ತ ಪೇರಿಸುವ ನಿಟ್ಟಿನಲ್ಲಿ ಸಹಕರಿಸಿದರು.

ಕರ್ನಾಟಕದ ಇನಿಂಗ್ಸ್ ನಂತರ, ತನ್ನ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡ, ಉತ್ತಮ ಆರಂಭ ಪಡೆಯಿತಾದರೂ ಕೇವಲ 21 ರನ್ ಮೊತ್ತಕ್ಕೆ ಆರಂಭಿಕ ಹೆರ್ವಾಡೇಕರ್ ಅವರನ್ನು  ಕಳೆದುಕೊಂಡಿತು. ಈ ವಿಕೆಟ್ ಪಡೆದ ಅಭಿಮನ್ಯು ಮಿಥುನ್, ಕರ್ನಾಟಕ ತಂಡಕ್ಕೆ ಮೊದಲ ಯಶಸ್ಸು ತಂದರು. ಆದರೂ, ಆನಂತರ ಜತೆಯಾದ ಮತ್ತೊಬ್ಬ ಆರಂಭಿಕ ಶ್ರೇಯಸ್ ಅಯ್ಯರ್ ಹಾಗೂ ಆದಿತ್ಯ ತಾರೆ, ತಂಡಕ್ಕೆ ಕೊಂಚ ನೆರವಾದರು. ನಂತರ ಮುಂಬೈ ಪಟಪಟನೇ ವಿಕೆಟ್ ಕಳೆ ದುಕೊಳ್ಳುತ್ತಿದ್ದರೂ, ಕ್ರೀಸ್ನಲ್ಲಿ ಗಟ್ಟಿಯಾಗಿ ಬೀಟ್ ಬೀಸುತ್ತಿದ್ದ ಅಭಿಷೇಕ್ ನಾಯರ್, ರಾಜ್ಯ ತಂಡಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿ ದ್ದರು. ಆದರೆ, ಕೊನೆಯ ಓವರ್ನಲ್ಲಿ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ವಿನಯ್ ಕುಮಾರ್, ರಾಜ್ಯದ ಗೆಲವನ್ನು ಗಟ್ಟಿಗೊಳಿಸಿದರು.

SCROLL FOR NEXT