ಬಿಎಫ್ ಸಿ ವರ್ಸಸ್ ಓಜೋನ್ ಎಫ್ ಸಿ (ಸಂಗ್ರಹ ಚಿತ್ರ) 
ಕ್ರೀಡೆ

ಬಿಎಫ್ ಸಿ ಪಂದ್ಯ ರೋಚಕ ಡ್ರಾ

ಕೊನೆಯ ನಿಮಿಷದವರೆಗೂ ರೋಮಾಂಚನ ಕಾಯ್ದುಕೊಂಡ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ ಸಿ) ಹಾಗೂ ಓಜೋನ್ ಫುಟ್ಬಾಲ್ ಕ್ಲಬ್ ನಡುವಣದ ಸೂಪರ್ ಡಿವಿಷನ್ ಫುಟ್ಬಾಲ್ ಪಂದ್ಯ ಕೊನೆಗೂ 11ರ ಸಮಬಲದಲ್ಲಿ ಡ್ರಾ ಆಯಿತು...

ಬೆಂಗಳೂರು: ಕೊನೆಯ ನಿಮಿಷದವರೆಗೂ ರೋಮಾಂಚನ ಕಾಯ್ದುಕೊಂಡ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ ಸಿ) ಹಾಗೂ ಓಜೋನ್ ಫುಟ್ಬಾಲ್ ಕ್ಲಬ್ ನಡುವಣದ ಸೂಪರ್ ಡಿವಿಷನ್ ಫುಟ್ಬಾಲ್ ಪಂದ್ಯ ಕೊನೆಗೂ 11ರ ಸಮಬಲದಲ್ಲಿ ಡ್ರಾ ಆಯಿತು.

ರಾಜ್ಯ ಫುಟ್ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಪಂದ್ಯ ತೀವ್ರ ಸ್ಪರ್ಧಾತ್ಮಕತೆಯಿಂದ ಕೂಡಿತ್ತು. ಗೋಲು ಗಳಿಸಲು ಎರಡೂ ತಂಡಗಳ ಆಟಗಾರರು ನಡೆಸಿದ  ಯತ್ನಗಳು ವಿಫಲ ವಾದವು. ಚುರುಕುತನ, ತಂತ್ರಗಾರಿಕೆ, ಪರಸ್ಪರರ ಯೋಜನೆಗಳನ್ನು ಹಿಮ್ಮೆಟ್ಟಿಸುವುದು  ಈ ಎಲ್ಲಾ ವಿಧಾನಗಳಲ್ಲಿ ಪರಸ್ಪರ ಪೈಪೋಟಿ ನೀಡಿದ ಆಟಗಾರರು ಒಬ್ಬರ  ಮೇಲೊಬ್ಬರು ಸವಾಲೆಸೆದರು. ಬಿಎಫ್ ಸಿ ಪರ ಆ್ಯಂಟೊ 88ನೇ ನಿಮಿಷದಲ್ಲಿ, ಓಜೋನ್ ಪರ ಕ್ಸೇವಿಯರ್ 41ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಎಡಿಇ ತಂಡಕ್ಕೆ ಭರ್ಜರಿ ಜಯ ಸೂಪರ್ ಡಿವಿಷನ್ ಪಂದ್ಯಕ್ಕೂ ಮುನ್ನ ನಡೆದ `ಎ' ಡಿವಿಷನ್ ಲೀಗ್ ಪಂದ್ಯದಲ್ಲಿ ಎಡಿಇ, ಎಲ್ಆರ್ಡಿಇ ತಂಡದ ವಿರುದ್ಧ 41 ಗೋಲುಗಳ ಗೆಲುವು ಸಾಧಿಸಿತು.  ಎಡಿಇ ಪರ ಪ್ರೇಮ್ (52ನೇ ನಿ.), ರಿಚರ್ಡ್ (57 ಹಾಗೂ 63 ನಿ.) ಹಾಗೂ ಆ್ಯಂಟನಿ (69) ಗೋಲು ದಾಖಲಿಸಿದರೆ, ಎಲ್ ಆರ್ಡಿಇ ಪರ ದಾಖಲಾದ ಏಕೈಕ ಗೋಲು ರವಿ (58ನೇ ನಿ.) ಅವರಿಂದ ಬಂತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್