ಕೋಲ್ಕತಾ: ಶೀಘ್ರದಲ್ಲೇ ಆರಂಭಗೊಳ್ಳಲಿರುವ, ಮಾಜಿ ಕ್ರಿಕೆಟ್ ತಾರೆಗಳ ಸಮಾಗಮದ ಮಾಸ್ಟರ್ ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯ ಲಿಬ್ರಾ ಲೆಜೆಂಡ್ಸ್ ತಂಡಕ್ಕೆ ಸೌರವ್ ಗಂಗೂಲಿ ನಾಯಕ ಹಾಗೂ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಮಾಜಿಗಳಾದ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಜಾಕ್ ಕಾಲಿಸ್, ಎಡಗೈ ಸ್ಪಿನ್ನರ್ ನಿಕ್ಕಿ ಬೋಯೆ, ಇಂಗ್ಲೆಂಡ್‍ನ ಸ್ಪಿನ್ನರ್ ಗ್ರೇಮ್ ಸ್ವಾನ್, ಆಸ್ಟ್ರೇಲಿಯಾದ ವೇಗಿ ಶಾನ್ ಟೇಯ್ಟ್, ಸ್ಪಿನ್ನರ್ ಬ್ರಾಡ್ ಹಾಗ್, ಹಾಲೆಂಡ್ ಆಲ್ರೌಂಡರ್ ರಿಯಾನ್ ಟೆನ್ ಡಾಚೆಟ್ ಅವರುಳ್ಳ ತಂಡವನ್ನು ಗಂಗೂಲಿ ಮುನ್ನಡೆಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದಾದಾ, ``ಘಟಾನುಘಟಿಗಳುಳ್ಳ ತಂಡ ಮುನ್ನಡೆಸಲು ಉತ್ಸುಕನಾಗಿದ್ದೇನೆ'' ಎಂದಿದ್ದಾರೆ.