ಕ್ರೀಡೆ

ಪಂಜಾಬ್, ಕೇರಳ ಜೈತ್ರಯಾತ್ರೆ

Srinivasamurthy VN

ಮೈಸೂರು: ಕೇರಳ ಮಹಿಳಾ ಮತ್ತು ಪಂಜಾಬ್ ಪುರುಷರ ತಂಡ ಜಯದ ನಾಗಾಲೋಟವನ್ನು ಮುಂದುವರೆಸಿವೆ. ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ  ನಡೆಯುತ್ತಿರುವ 66ನೇ ಹಿರಿಯರ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಕೇರಳ ಮಹಿಳಾ ತಂಡ ಮತ್ತು ಪಂಜಾಬ್ ಪುರುಷರ ತಂಡವು  ಜಯ ಸಾಧಿಸಿದವು.

ಮಂಗಳವಾರ ನಡೆದ ಪಂದ್ಯದಲ್ಲಿ ಕೇರಳ ತಂಡದ ಅಂತಾರಾಷ್ಟ್ರೀಯ ಆಟಗಾರ್ತಿ ಪಿ. ಎಸ್. ಜೀನಾ (25 ಪಾಯಿಂಟ್) ನೀಡಿದ ಉತ್ತಮ ಪ್ರದರ್ಶನದಿಂದ 65-35 ಪಾಯಿಂಟ್‍ಗಳ ಭಾರಿ  ಅಂತರದಿಂದ ಮಹಾರಾಷ್ಟ್ರ ತಂಡದ ವಿರುದ್ಧ ಜಯ ದಾಖಲಿಸಿದರೆ, ಮಹಾರಾಷ್ಟ್ರ ಪರ ಮನಿಷಾ ಡಂಗೆ (17) ಪ್ರದರ್ಶನವು ತಂಡಕ್ಕೆ ಜಯ ತರಲಿಲ್ಲ. ಉಳಿದಂತೆ ಇಂಡಿಯನ್ ರೈಲ್ವೇಸ್ 83-33 ಪಾಯಿಂಟ್‍ಗಳ ದೆಹಲಿ ವಿರುದ್ಧ, ತೆಲಂಗಾಣ ತಂಡವು 79-72 ರಿಂದ ಛತ್ತೀಸ್ ಗಡ ವಿರುದ್ಧ ಜಯ ಸಾಧಿಸಿದವು.

SCROLL FOR NEXT