ಕ್ವಾರ್ಟರ್ ಫೈನಲ್ ಗೆ ಸಾನಿಯಾ ಜೋಡಿ
ವಿಶ್ವದ ಅಗ್ರ ಮಹಿಳಾ ಡಬಲ್ಸ್ ಜೋಡಿಯಾದ ಭಾರತದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್, ಸಿಡ್ನಿ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಯಲ್ಲೂ ತಮ್ಮ ಜೈತ್ರಯಾತ್ರೆ ಮುಂದುವರಿಸಿದ್ದಾರೆ...
ಸಿಡ್ನಿ: ವಿಶ್ವದ ಅಗ್ರ ಮಹಿಳಾ ಡಬಲ್ಸ್ ಜೋಡಿಯಾದ ಭಾರತದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್, ಸಿಡ್ನಿ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಯಲ್ಲೂ ತಮ್ಮ ಜೈತ್ರಯಾತ್ರೆ ಮುಂದುವರಿಸಿದ್ದಾರೆ.
ಮಂಗಳವಾರ ನಡೆದ ಸಿಡ್ನಿ ಟೂರ್ನಿಯ ಮಹಿಳೆಯರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತಸ್ವಿಜರ್ಲೆಂಡ್ ಜೋಡಿ, ಆಸ್ಟ್ರೇಲಿಯಾದ ಅನಾಸ್ತೇನಿಯಾ ರೊಡಿನೊವಾ ಹಾಗೂ ಅರಿನಾ ರೊಡಿ ನೊವಾ ಸೋದರಿಯರನ್ನು 62, 63 ಸೆಟ್ಗಳ ಅಂತರದಲ್ಲಿ ಮಣಿಸಿ, ಟೂರ್ನಿಯ 8ರ ಘಟ್ಟಕ್ಕೆ ಪ್ರವೇಶ ಪಡೆಯುವುದರೊಂದಿಗೆ ಸತತ 27ನೇ ಜಯ ಪಡೆಯಿತು. ಇತ್ತ ಭಾರತದ ರೋಹನ್ ಬೋಪಣ್ಣ, ಪುರುಷರ ಡಬಲ್ಸ್ ವಿಭಾಗದಲ್ಲಿ ತಮ್ಮ ಜತೆಗಾರ ಫ್ಲಾರಿನ್ ಮರ್ಜಿಯಾ ಜತೆ, ಉಜ್ಬೇಕಿಸ್ತಾನದ ಡೆನಿಸ್ , ಫಿನ್ಲೆಂಡ್ನ ಹೆನ್ರಿ ಕಾಂಟಿನೆನ್ ಜೋಡಿ ವಿರುದ್ಧ 67 (27), 63, 108 ಸೆಟ್ಗಳ ಅಂತರದಲ್ಲಿ ಜಯಿಸಿ, ಕ್ವಾರ್ಟರ್ ಫೈನಲ್ಗೆ ಕಾಲಿಟ್ಟರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.