ಸಾನಿಯಾ ಮಿರ್ಜಾ 
ಕ್ರೀಡೆ

ಸಿಡ್ನಿ ಟೆನ್ನಿಸ್: ಫೈನಲ್‌ಗೆ ಲಗ್ಗೆ ಇಟ್ಟ ಸಾನಿಯಾ–ಮಾರ್ಟಿನಾ ಹಿಂಗೀಸ್

ಭಾರತದ ಸಾನಿಯಾ ಮಿರ್ಜಾ  ಹಾಗೂ ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಡಬ್ಲ್ಯುಟಿಎ ಸಿಡ್ನಿ ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ....

ಸಿಡ್ನಿ: ಭಾರತದ ಸಾನಿಯಾ ಮಿರ್ಜಾ  ಹಾಗೂ ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಮತ್ತೊಂದು ಪ್ರಶಸ್ತಿ ಗೆಲ್ಲುವ ಸನಿಹದಲ್ಲಿದ್ದು, ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಸಿಡ್ನಿ ಅಂತರರಾಷ್ಟ್ರೀಯ ಟೆನಿಸ್‌  ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಸಾನಿಯಾ  ಹಾಗೂ ಮಾರ್ಟಿನಾ ಅವರ ಸತತ 29ನೇ ಗೆಲುವು  ಇದಾಗಿದೆ. 1992ರಲ್ಲಿದ್ದ ಸತತ ಪಂದ್ಯಗಳಲ್ಲಿ ಗೆಲುವು ಪಡೆದ ದಾಖಲೆ ಸರಿಗಟ್ಟಿದರು. ಅಗ್ರ ಶ್ರೇಯಾಂಕ ಹೊಂದಿರುವ ಸಾನಿಯಾ ಜೋಡಿ ಗುರುವಾರ ನಡೆದ ಸೆಮಿ ಫೈನಲ್‌ ಪಂದ್ಯದಲ್ಲಿ  4-6,  6-3, 10-8ರ ನೇರ ಸೆಟ್‌ಗಳಿಂದ ರುಮೇನಿಯಾದ ಇಯಾನಾ  ರಲುಕಾ ಒಲಾರು ರಷ್ಯಾದ ಯರಸ್ಲೋವಾ ಶ್ವಡೋವಾ ಅವರನ್ನು ಮಣಿಸಿದರು.

ಸೆಮಿ ಫೈನಲ್‌ ಪಂದ್ಯದಲ್ಲಿ ಗೆಲುವು ಪಡೆಯಲು ಸಾನಿಯಾ ಹಾಗೂ ಮಾರ್ಟಿನಾ ಅವರಿಗೆ ಹೆಚ್ಚು ಕಷ್ಟವಾಗಲಿಲ್ಲ. ಸಾನಿಯಾ ಮತ್ತು ಮಾರ್ಟಿನಾ  ಚುರುಕಿನ ಸರ್ವ್‌ಗಳಿಂದ ಎದುರಾಳಿ ಆಟಗಾರ್ತಿಯರ ಸರ್ವ್‌ಗಳನ್ನು ಮುರಿದು ಗೆಲುವಿನ ನಗೆ ಬೀರಿದರು.

ಸಾನಿಯಾ ಹಾಗೂ ಮಾರ್ಟಿನಾ ಕಳೆದ  ವರ್ಷದಿಂದ ಒಟ್ಟಾಗಿ ಆಡುತ್ತಿದ್ದು. ಇಲ್ಲಿಯವರೆಗೂ ಒಟ್ಟು ಹತ್ತು ಡಬ್ಲ್ಯುಟಿಎ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಭಾರತದಲ್ಲಿ ಕಳೆದ 8 ತಿಂಗಳಲ್ಲಿ 254 ಹಿಂದೂಗಳು ಮುಸ್ಲಿಂ ಜಿಹಾದಿ ಹಿಂಸಾಚಾರಕ್ಕೆ ಬಲಿ: ಎಲ್ಲಿದೆ ನ್ಯಾಯ; VHP

ಭಾರತೀಯ ವಾಯುಪಡೆಗೆ ವರ್ಷಕ್ಕೆ 36-40 ಹೊಸ ಯುದ್ಧ ವಿಮಾನಗಳ ಅಗತ್ಯ: ವಾಯುಸೇನಾ ಮುಖ್ಯಸ್ಥ

ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಹಣೆಗೆ ಮುತ್ತಿಟ್ಟ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?

BSFನಿಂದ ಇಬ್ಬರು ಪಾಕಿಗಳ ಹತ್ಯೆ: ಭಾರತೀಯ ರಾಯಭಾರಿ ಕರೆಸಿಕೊಂಡು, ಪ್ರತಿಭಟನೆ ದಾಖಲಿಸಿದ ಪಾಕಿಸ್ತಾನ!