ಹ್ಯಾಮಿಲ್ಟನ್: ಭಾನುವಾರ ಇಲ್ಲಿನ ಸೆಡ್ಡಾನ್ ಪಾಕ್ರ್ ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 10 ವಿಕೆಟ್ ಅಂತರದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿತು. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 11ರ ಸಮಬಲ ಸಾಧಿಸಿತು.
ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆ ನಂತರ 20 ಓವರ್‍ಗಳಲ್ಲಿ 7 ವಿಕೆಟ್‍ಗೆ 168 ರನ್ ದಾಖಲಿಸಿತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 17.4 ಓವರ್‍ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 171 ರನ್ ದಾಖಲಿಸಿತು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ 20 ಓವರ್‍ಗಳಲ್ಲಿ 7 ವಿಕೆಟ್‍ಗೆ 168 (ಅಕ್ಮಲ್ ಅಜೇಯ 56, ಮಲಿಕ್ 39, ಮೆಕ್ಲೆನಾಘನ್ 23ಕ್ಕೆ 2) ನ್ಯೂಜಿಲೆಂಡ್ 17.4 ಓವರ್‍ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 171 (ಗುಪ್ಟಿಲ್ ಅಜೇಯ 87, ಕೇನ್ ಅಜೇಯ 72)
ಪಂದ್ಯಶ್ರೇಷ್ಠ: ಮಾರ್ಟೀನ್ ಗುಪ್ಟಿಲ್