ಓಜೋನ್ ಎಫ್ ಸಿಗೆ ಭರ್ಜರಿ ಜಯ
ತಂಡದ ಪ್ರಮುಖ ಆಟಗಾರ ಆ್ಯಂಟೊ ಕ್ಷೇವಿಯರ್ ಅವರ ಆಕರ್ಷಕ ಎರಡು ಗೋಲಿನ ನೆರವಿನಿಂದ ಓಜೋನ್ ಎಫ್ ಸಿ ತಂಡ ಬಿಡಿಎಫ್ ಎ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ ಆದಾಯ ತೆರಿಗೆ ತಂಡದ..
ಬೆಂಗಳೂರು: ತಂಡದ ಪ್ರಮುಖ ಆಟಗಾರ ಆ್ಯಂಟೊ ಕ್ಷೇವಿಯರ್ ಅವರ ಆಕರ್ಷಕ ಎರಡು ಗೋಲಿನ ನೆರವಿನಿಂದ ಓಜೋನ್ ಎಫ್ ಸಿ ತಂಡ ಬಿಡಿಎಫ್ ಎ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ ಆದಾಯ ತೆರಿಗೆ ತಂಡದ ವಿರುದ್ಧ ಭರ್ಜರಿ ಜಯ ಸಂಪಾದಿಸಿದೆ.
ಭಾನುವಾರ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಓಜೋನ್ ಎಫ್ ಸಿ 42 ಗೋಲುಗಳ ಅಂತರದಲ್ಲಿ ಆದಾಯ ತೆರಿಗೆ ತಂಡವನ್ನು ಮಣಿಸಿತು. ಓಜೋನ್ ಎಫ್ ಸಿ ಪರ ಆ್ಯಂಟೊ 23 ಮತ್ತು 78ನೇ, ಅಮೋಯ್ಸ 46ನೇ, ಅಕ್ಷಯ್ ಕುಮಾರ್ 68ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಆದಾಯ ತೆರಿಗೆ ತಂಡದ ಪರ ಎ.ಡಿ.ಕುಮಾರ್ 39ನೇ, ಅಮಲ್ ದೀಪಕ್ ಕುಮಾರ್ 88ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಬಿಯುಎಫ್ ಸಿಗೆ ಜಯ: ಇನ್ನು ಭಾನುವಾರ ನಡೆದ ಎ ಡಿವಿಷನ್ ಪಂದ್ಯದಲ್ಲಿ ಬಿಯು ಎಫ್ ಸಿ ತಂಡ ಅರ್ಹ ಜಯ ಸಂಪಾದಿಸಿತು. ಬಿಡಿಎಫ್ ಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಿಯುಎಫ್ ಸಿ ತಂಡ ಬೆಂಗಳೂರು ಈಗಲ್ಸ್ ವಿರುದ್ಧ 10 ಗೋಲುಗಳ ಅಂತರದಲ್ಲಿ ಜಯಿಸಿತು. ಬಿಯುಎಫ್ ಸಿ ತಂಡದ ಪರ ಇಮಾನ್ಯುಯೆಲ್ 25ನೇ ನಿಮಿಷದಲ್ಲಿ ಗೋಲು ಬಾರಿಸಿದರು.