ನವದೆಹಲಿ: ಫುಟ್ಬಾಲ್‍ನ ಖ್ಯಾತ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ, ಪ್ರಖ್ಯಾತ ಮ್ಯಾಗಜೀನ್ ಜಿಕ್ಯೂನ ಮುಖಪುಟಕ್ಕೆ ಮಾಡೆಲ್ ಆಗಿದ್ದಾರೆ. ಜತೆಗೆ ಜನಪ್ರಿಯ ಮಾಡೆಲ್ ಅಲೆಸ್ಸಾಂಡ್ರಾ ಆಂಬ್ರೊಸಿಯೋ ಜತೆ ಸಖತ್ ಗ್ಲಾಮ ರ್ ಆಗಿ ಪೋಸ್ ನೀಡಿದ್ದಾರೆ.
ಇತ್ತೀಚೆಗೆ ಪುರುಷ ಮಾಡೆಲ್ ಆಗಿ ಕಾಣಿಸಿಕೊಳ್ಳುತ್ತಿರುವ ರೊನಾಲ್ಡೊ ಈ ಮ್ಯಾಗಜೀನ್‍ಗೂ ತಮ್ಮ ದೇಹ ಸೌಂದರ್ಯ ವನ್ನು ತೋರಿಸಿದ್ದಾರೆ. ಬಿಕಿನಿ ತೊಟ್ಟಿರುವ ಅಲೆಸ್ಸಾಂಡ್ರಾ ಅವರನ್ನು ತಮ್ಮ ಬೆನ್ನ ಮೇಲೆ ಹೊತ್ತಿರುವ ಪೋಸ್ ಮುಖಪುಟಕ್ಕೆ ಬಳಸಲಾಗಿದೆ.