ಧೋನಿ ವಿರುದ್ಧದ ವಾರಂಟ್ ರದ್ದು
ನಿಯತಕಾಲಿಕವೊಂದರಲ್ಲಿ ವಿಷ್ಣುವಿನಂತೆ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಎಂ.ಎಸ್.ಧೋನಿ ವಿರುದ್ಧ ಇಲ್ಲಿನ ಕೋರ್ಟ್ ಹೊರಡಿಸಿದ್ದ ವಾರಂಟ್ ಅನ್ನು ಹಿಂಪಡೆದಿದೆ...
ಅನಂತಪುರ: ನಿಯತಕಾಲಿಕವೊಂದರಲ್ಲಿ ವಿಷ್ಣುವಿನಂತೆ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಎಂ.ಎಸ್.ಧೋನಿ ವಿರುದ್ಧ ಇಲ್ಲಿನ ಕೋರ್ಟ್ ಹೊರಡಿಸಿದ್ದ ವಾರಂಟ್ ಅನ್ನು ಹಿಂಪಡೆದಿದೆ.
ಈ ಬಗ್ಗೆ ಅವರ ಕ್ರೀಡಾ ಚಟುವಟಿಕೆ ನೋಡಿಕೊಳ್ಳುತ್ತಿರುವ ರಿತಿ ಸ್ಪೋರ್ಟ್ಸ್ ಹೇಳಿಕೆ ನೀಡಿದೆ. ``ರಜನೀಶ್ ಛೋಪ್ರಾ ನೇತೃತ್ವದ ಕಾನೂನು ತಂಡ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದೆ'' ಎಂದು ತಿಳಿಸಿದೆ. ``ವಾರಂಟ್ ನೀಡಿದ್ದು ಧೋನಿ ಗಮನಕ್ಕೆ ಬಂದಿಲ್ಲ. ಖುದ್ದಾಗಿ ಹಾಜರಾಗಲು ಸಮನ್ಸ್ ನೀಡಲಾಗಿಲ್ಲ. ಹೀಗಾಗಿ ಜ.7ರಂದು ಹಾಜರಾಗಲು ಸಾಧ್ಯವಾಗಲಿಲ್ಲ,'' ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.