ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿ( ಸಾಂಕೇತಿಕ ಚಿತ್ರ) 
ಕ್ರೀಡೆ

ಎಂಇಜಿಗೆ ರೋಚಕ ಜಯ

ಎಂಇಜಿ ಅಂಡ್ ಸೆಂಟರ್ ತಂಡ ಬಿಡಿಎಎಫ್ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ 1-0 ಗೋಲಿನ ಅಂತರದಿಂದ ಎಎಸ್‍ಸಿ ತಂಡದ ವಿರುದ್ಧ ರೋಚಕ ಜಯ ಪಡೆಯಿತು.

ಬೆಂಗಳೂರು: ಪಂದ್ಯದ ಆರಂಭಿಕ ಹಂತದಲ್ಲಿ ನುಗೆರಿಲಾಲ್ ಹಮರ್ ಅವರ ಆಕರ್ಷಕ ಗೋಲಿನ ನೆರವಿನಿಂದ ಎಂಇಜಿ ಅಂಡ್ ಸೆಂಟರ್ ತಂಡ ಬಿಡಿಎಎಫ್ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ 1-0 ಗೋಲಿನ ಅಂತರದಿಂದ ಎಎಸ್‍ಸಿ ತಂಡದ ವಿರುದ್ಧ ರೋಚಕ ಜಯ ಪಡೆಯಿತು.
ಮಂಗಳವಾರ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಸೂಪರ್ ಡಿವಿಷನ್ ಲೀಗ್ ಹಂತದ ಪಂದ್ಯದಲ್ಲಿ ಆರಂಭದಿಂದಲೇ ಎಎಸ್‍ಸಿ ತಂಡದ ಮೇಲೆ ನಿಯಂತ್ರಣ ಸಾಧಿಸಿದ ಎಂಇಜಿ ನಿಯಮಿತವಾಗಿ ಗೋಲಿಗಾಗಿ ದಾಳಿ ನಡೆಸಿತು. ಅದರ ಪರಿಣಾಮವಾಗಿ ಮೊದಲಾರ್ಧದಲ್ಲೇ ಎಂಇಜಿ ಗೋಲಿನ ರುಚಿಯುಂಡಿತು. ಪಂದ್ಯದ 12ನೇ ನಿಮಿಷದಲ್ಲಿ ನುಗೆರಿಲಾಲ್ ಹಮರ್ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದಿತ್ತರು. ಆರಂಭದಲ್ಲಿ ಸಿಕ್ಕ ಮುನ್ನಡೆಯನ್ನು ಅಂತಿಮ ಹಂತದವರೆಗೂ ಮುಂದುವರಿಸಿದ ಎಂಇಜಿ ಜಯದ ನಗೆ ಬೀರಿತು.

ಎಡಿಇಗೆ ಭರ್ಜರಿ ಜಯ: ಇನ್ನು ಇದಕ್ಕೂ ಮುನ್ನ ನಡೆದ ಎ ಡಿವಿಷನ್ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಎಡಿಇ ತಂಡ ಭರ್ಜರಿ ಜಯ ಸಂಪಾದಿಸಿತು. ಯಂಗ್ ಚಾಲೆಂಜರ್ ವಿರುದ್ಧದ ಪಂದ್ಯದಲ್ಲಿ ಆರಂಭದಿಂದ ಅಂತಿಮ ಹಂತದವರೆಗೂ ಪೂರ್ಣ ಪ್ರಾಬಲ್ಯ ಮೆರೆದ ಎಡಿಇ 4-೦ ಗೋಲುಗಳ ಅಂತರದಲ್ಲಿ ಜಯಿಸಿತು. ಎಡಿಇ ತಂಡದ ಪರ ಪ್ರೇಮ್  ೫೮ ಮತ್ತು 63ನೇ, ನಿಕ್ಕಿ 68ನೇ ಹಾಗೂ ಕಪಿಲನ್ 79ನೇ ನಿಮಿಷದಲ್ಲಿ ತಲಾ
ಒಂದೊಂದು ಗೋಲು ದಾಖಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT