ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಆರನೇ ಆವೃತ್ತಿಯ ಟೂರ್ನಿಯಲ್ಲಿ ನಟ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಭಾನುವಾರದಿಂದ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ನಟ ಜೀವಾ ನೇತೃತ್ವದ ಚೆನ್ನೈ ರೈನೋಸ್ ತಂಡವನ್ನು ಎದುರಿಸಲಿದೆ.
ಸಿಸಿಎಲ್ ನ ಮೊದಲೆರಡು ಟೂರ್ನಿಯ ಫೈನಲ್ ನಲ್ಲಿ ಕರ್ನಾಟಕವನ್ನು ಮಣಿಸಿದ್ದ ಚೆನ್ನೈ ರೈನೋಸ್ ತಂಡ ಈ ಬಾರಿ ಮೊದಲ ಪಂದ್ಯದಲ್ಲಿಯೇ ಎದುರಾಗಿದ್ದು, ಚೈನ್ನೈ ತಂಡವನ್ನು ಮಣಿಸಲು ಕರ್ನಾಟಕ ತಂಡ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ. ಆಡಿರುವ ಐದು ಆವೃತ್ತಿಯಲ್ಲಿ 4 ಬಾರಿ ಫೈನಲ್ ಆಡಿರುವ ಏಕೈಕ ತ೦ಡ ಎನ್ನುವ ಹೆಮ್ಮೆ ಕನಾ೯ಟಕ ತಾರೆಗಳ ತ೦ಡದ್ದಾಗಿದ್ದು, ಈಗಾಗಲೇ 2 ಭಾರಿ ಪ್ರಶಸ್ತಿಗೆ ಮುತ್ತಿಟ್ಟಿದೆ. 3ನೇ ಬಾರಿಯೂ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಆಟಗಾರರಿದ್ದಾರೆ.
ತಾಪ್ಸಿ ರಾಯಭಾರಿ
ಸಿಸಿಎಲ್‍ನ ಆರನೇ ಆವೃತ್ತಿಗೆ ನಟಿ ತಾಪ್ಸಿ ಪನ್ನು ಅವರು ರಾಯಭಾರಿಯಾಗಿ ಆಯ್ಕೆಯಾಗಿದ್ದು, ಮು೦ಬ್ಯೆ ತ೦ಡಕ್ಕೆ ಕೃತಿ ಸನೋನ್ ರಾಯಭಾರಿಯಾಗಿದ್ದಾರೆ. ಕನಿಷ್ಠ 45 ರೂ. ಮುಖಬೆಲೆಯ ಟಿಕೆಟ್‍ಗಳಿ೦ದಾಗಿ ಸಿಸಿಎಲ್ ಪ್ರೇಕ್ಷಕ-ಸ್ನೇಹಿಯೂ ಆಗಿದೆ. ಸಿಸಿಎಲ್ ಆರ೦ಭಕ್ಕೆ ಮುನ್ನ ಶುಕ್ರವಾರ ಬೆ೦ಗಳೂರಿನಲ್ಲಿ ನಡೆದ ಸಮಾರ೦ಭದಲ್ಲಿ ಅಶೋಕ್ ಖೇಣಿ, ಸುದೀಪ್, ನಟಿ ಶಮಿ೯ಳಾ ಮಾ೦ಡೆ್ರ ಹಾಜರಿದ್ದರು.