ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಂಗ್ರಹ ಚಿತ್ರ) 
ಕ್ರೀಡೆ

ಸಿಸಿಎಲ್ 6ನೇ ಆವೃತ್ತಿಗೆ ಇಂದು ಚಾಲನೆ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟಿ20 ಸರಣಿಯ 6ನೇ ಆವೃತ್ತಿಗೆ ಶನಿವಾರ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಟೂರ್ನಿಯ ಮೊದಲ ಪಂದ್ಯವೇ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಉದ್ಯಾನನಗರಿಯ ಅಭಿಮಾನಿಗಳಿಗೆ ಸಂತಸ ತಂದಿದೆ...

ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟಿ20 ಸರಣಿಯ 6ನೇ ಆವೃತ್ತಿಗೆ ಶನಿವಾರ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಟೂರ್ನಿಯ ಮೊದಲ ಪಂದ್ಯವೇ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಉದ್ಯಾನನಗರಿಯ ಅಭಿಮಾನಿಗಳಿಗೆ ಸಂತಸ ತಂದಿದೆ.

"ಸಿನಿಮಾ ತಾರೆಗಳ ಐಪಿಎಲ್' ಎ೦ದೇ ಪರಿಗಣಿಸಲಾಗುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನ (ಸಿಸಿಎಲ್) 6ನೇ ಆವೃತ್ತಿಗೆ ಹೊಸ ತಂಡವೊಂದು ಸೇರ್ಪಡೆಯಾಗಿದ್ದು, ಅರು೦ಧತಿ ಚಿತ್ರದ "ಪಶುಪತಿ' ಖ್ಯಾತಿಯ ನಟ ಸೋನು ಸೂದ್ ನೇತೃತ್ವದ ಹೊಸ ತ೦ಡ ಪ೦ಜಾ ಬ್‍ದ ಶೇರ್ ಸಿಸಿಎಲ್ ಗೆ ಸೇರ್ಪಡೆಯಾಗಿದೆ. ಅಲ್ಲದೆ ಟೂರ್ನಿಯ ಮೊದಲ ಪಂದ್ಯವನ್ನು ಕೂಡ ಆಡುತ್ತಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಶನಿವಾರದ ಮೊದಲ ಪ೦ದ್ಯದಲ್ಲಿ ಪಂಜಾಬ್ ತಂಡ ಮು೦ಬ್ಯೆ ಹೀರೋಸ್ ತಂಡವನ್ನು ಎದುರಿಸಲಿದೆ.

ಜನವರಿ 23ರಿಂದ ಆರಂಭವಾಗಲಿರುವ ಟೂರ್ನಿ ಫೆಬ್ರವರಿ 14ರವರೆಗೆ ನಡೆಯಲಿದ್ದು, ವೀಕೆ೦ಡ್‍ಗಳಲ್ಲಿ ಮಾತ್ರ ಸರಣಿ ನಡೆಯಲಿದ್ದು, 8 ದಿನಗಳ ಟೂನಿ೯ಯಲ್ಲಿ 15 ಪ೦ದ್ಯಗಳು ನಡೆಯಲಿವೆ. ಹ್ಯೆದರಾಬಾದ್‍ನಲ್ಲಿ ಫೈನಲ್ ಪ೦ದ್ಯ ನಡೆಯಲಿದೆ. ಕಳೆದ ಬಾರಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ವೀರ್ ಮರಾಠಿ ತಂಡದ ಬದಲಿಗೆ ಪಂಜಾಬ್ ದಿ ಶೇರ್ ತಂಡಕ್ಕೆ ಸ್ಥಾನ ಕಲ್ಪಿಸಲಾಗಿದೆ. ಇನ್ನು ಟೂರ್ನಿಯಿಂದ ಬಂದ ಲಾಭದ ಹಣವನ್ನು ಆಸಿಡ್ ದಾಳಿಗೆ ಒಳಗಾದವರಿಗೆ ನೆರವಾಗುವ ಗುರಿ ಹೊ೦ದಲಾಗಿದೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ. ಆಸಿಡ್ ದಾಳಿಗೆ  ಒಳಗಾದವರಿಗೆ ನೆರವು ನೀಡುವುದು ಹಾಗೂ ಚರ್ಮದಾನದ ಬಗ್ಗೆ ಅರಿವು ಮೂಡಿಸುವ ಗುರಿಯನ್ನು 6ನೇ ಆವೃತ್ತಿಯ ಲೀಗ್‍ನಲ್ಲಿ ಹಮ್ಮಿಕೊಳ್ಳಲಾಗಿದೆ. ಇನ್ನು ಕಳೆದ ಬಾರಿ ನಡೆದ ಟೂರ್ನಿಯಿಂದ ಬಂದ ಹಣದಲ್ಲಿ 100 ಬಡ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವು ನೀಡಲಾಗಿತ್ತು.

ಟಿ20 ವಿಶ್ವಕಪ್‍ನಿ೦ದಾಗಿ ತಿಂಗಳ ಮುಂಚಿತವಾಗಿ ಟೂರ್ನಿ ಆಯೋಜನೆ
ಸಾಮಾನ್ಯವಾಗಿ ಫೆಬ್ರವರಿ-ಮಾಚ್‍೯ನಲ್ಲಿ ನಡೆಯುತ್ತಿದ್ದ ಸಿಸಿಎಲ್ ಟೂರ್ನಿ, ಈ ಬಾರಿ ಒ೦ದು ತಿ೦ಗಳು ಮು೦ಚಿತವಾಗಿ ನಡೆಯುತ್ತಿದೆ. ಮಾಚ್‍೯ನಲ್ಲಿ ಏಷ್ಯಾಕಪ್ ಟಿ20 ಹಾಗೂ ಟಿ20 ವಿಶ್ವಕಪ್ ಇರುವ ಹಿನ್ನಲೆಯಲ್ಲಿ ಆಯೋಜಕರು ಸಿಸಿಎಲ್ ಟೂರ್ನಿಯನ್ನು ಒಂದು ತಿಂಗಳ ಮುಂಚಿತವಾಗಿಯೇ ಆಯೋಜಿಸಿದ್ದಾರೆ.

ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳು
ಬೆ೦ಗಾಲ್ ಟೈಗರ್ಸ್, ಭೋಜಪುರಿ ದಬ೦ಗ್ಸ್, ಚೆನ್ನೈ ರೈನೋಸ್, ಕನಾ೯ಟಕ ಬುಲ್ಡೋಜರ್ಸ್, ಕೇರಳ ಸ್ಟ್ರೈಕರ್ಸ್, ಮು೦ಬ್ಯೆ ಹೀರೋಸ್, ಪ೦ಜಾಬ್ ದ ಶೇರ್ ಹಾಗೂ ಹಾಲಿ ಚಾ೦ಪಿಯನ್ ತೆಲುಗು ವಾರಿಯರ್ಸ್, ಪಂಜಾಬ್ ದಿ ಶೇರ್.

ಇ೦ದಿನ ಪ೦ದ್ಯಗಳು
ಮು೦ಬ್ಯೆ ಹೀರೋಸ್ -ಪ೦ಜಾ ಬ್‍ದ ಶೇರ್
ಆರ೦ಭ: ಮಧ್ಯಾಹ್ನ 2.00

ತೆಲುಗು ವಾರಿಯರ್ಸ್‍-ಕೇರಳ ಸ್ಟ್ರೈಕರ್ಸ್
ಆರ೦ಭ: ಸ೦ಜೆ 7.00

ನೇರಪ್ರಸಾರ: ಕಲರ್ಸ್ (ಹಿ೦ದಿ)
ಸ್ಥಳ: ಚಿನ್ನಸ್ವಾಮಿ ಕ್ರೀಡಾ೦ಗಣ, ಬೆ೦ಗಳೂರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT