ಸಾನಿಯಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ (ಸಂಗ್ರಹ ಚಿತ್ರ) 
ಕ್ರೀಡೆ

ಆಸ್ಟ್ರೇಲಿಯನ್ ಓಪನ್: ಸೆಮೀಸ್​ಗೆ ಸಾನಿಯಾ-ಮಾರ್ಟಿನಾ ಜೋಡಿ

ವಿಶ್ವದ ನಂಬರ್ 1 ಟೆನ್ನಿಸ್ ಜೋಡಿ ಭಾರತದ ಖ್ಯಾತ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡ್​ನ ಮಾರ್ಟಿನಾ ಹಿಂಗೀಸ್ ಜೋಡಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ...

ಮೆಲ್ಬೋರ್ನ್: ವಿಶ್ವದ ನಂಬರ್ 1 ಟೆನ್ನಿಸ್ ಜೋಡಿ ಭಾರತದ ಖ್ಯಾತ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡ್​ನ ಮಾರ್ಟಿನಾ ಹಿಂಗೀಸ್ ಜೋಡಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ  ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿಯ ಅನಾ ಲೆನಾ ಗ್ರೊನೆಫೆಲ್ಡ್ ಮತ್ತು ಅಮೆರಿಕದ ಕೊಕೊ ವ್ಯಾಂಡೆವೆಘೆ ಜೋಡಿ ವಿರುದ್ಧ ಭರ್ಜರಿ ಜಯ ಸಾಧಿಸಿದ ಈ ಜೋಡಿ  ಅರ್ಹವಾಗಿಯೇ ಸೆಮಿಫೈನಲ್ ಗೆ ರಹದಾರಿ ಪಡೆದಿದೆ. ಸುಮಾರು ಒಂದು ಗಂಟೆ 47 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಆರಂಭದಿಂದಲೂ ಮೇಲುಗೈ ಸಾಧಿಸಿದ ಈ ಜೋಡಿ ಅನಾ ಲೆನಾ  ಗ್ರೊನೆಫೆಲ್ಡ್ ಮತ್ತು ಕೊಕೊ ವ್ಯಾಂಡೆವೆಘೆ ಜೋಡಿಯನ್ನು 6-4, 4-6, 6-1 ನೇರ ಸೆಟ್ ಗಳ ಅಂತರದಿಂದ ಸೋಲಿಸಿತು.

ಇಂದಿನ ಪಂದ್ಯದ ಗೆಲುವಿನ ಮೂಲಕ ವಿಶ್ವ ನಂಬರ್ ಡಬಲ್ಸ್ ಜೋಡಿ ಗೆಲುವಿನ ಸಂಖ್ಯೆಯನ್ನು 34ಕ್ಕೆ ಏರಿಕೆ ಮಾಡಿಕೊಂಡಿದೆ. 2011ರಲ್ಲಿ ಜೊತೆಯಾದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ತನ್ನ ಯಶಸ್ಸಿನಿಂದಲೇ ಇದೀಗ ನಂಬರ್ ಒನ್ ಸ್ಥಾನಕ್ಕೇರಿದ್ದು, ಒಟ್ಟು 11 ಮಹಿಳಾ ಡಬಲ್ಸ್ ಪ್ರಶಸ್ತಿಗಳನ್ನು ಮತ್ತು ವಿಂಬಲ್ಡನ್ ಮತ್ತು ಯುಎಸ್ ಒಪನ್ ನ ಎರಡು ಗ್ರ್ಯಾಂಡ್  ಸ್ಲ್ಯಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಈ ಜೋಡಿ 13ನೇ ಶ್ರೇಯಾಂಕದ ಜೂಲಿಯಾ ಜಾರ್ಜಸ್ ಮತ್ತು ಕ್ಯಾರೊಲಿನಾ ಪ್ಲಿಸ್ಕೋವಾ ಅವರನ್ನು ಎದುರಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel