ಕ್ರೀಡೆ

ಆಸ್ಟ್ರೇಲಿಯನ್ ಓಪನ್ ಟೆನಿಸ್: ಜರ್ಮನಿಯ ಏಂಜೆಲಿಕ್ ಕರ್ಬರ್ ವಿರುದ್ಧ ಸೆರೆನಾಗೆ ಸೋಲು

Srinivas Rao BV

ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ ಫೈನಲ್ ನಲ್ಲಿ  ಅಗ್ರ ಶ್ರೇಯಾಂಕಿತೆ ಸೆರೆನಾ ವಿಲಿಯಮ್ಸ್  ಗೆ ಜರ್ಮನಿಯ ಏಂಜೆಲಿಕ್ ಕರ್ಬರ್ ವಿರುದ್ಧ ಭಾರಿ ಸೋಲುಂಟಾಗಿದೆ.
ಸೆರೆನಾ ವಿಲಿಯಮ್ಸ್ ಅವರನ್ನು 6 -4 , 3-6 , 6 -4  ಸೆಟ್ ಗಳಿಂದ ಮಣಿಸಿರುವ ಜರ್ಮನಿಯ ಏಂಜೆಲಿಕ್ ಕರ್ಬರ್ ಪ್ರಥಮ ಬಾರಿಗೆ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪ್ರಶಸ್ತಿ ಗಳಿಸಿದ್ದಾರೆ.  6 ಬಾರಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಫೈನಲ್ ನ್ನು ಗೆದ್ದಿದ್ದ ಸೆರೆನಾ ವಿಲಿಯಮ್ಸ್ ಈಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಸೆರೆನಾ ಅವರ  ಅಬ್ಬರದ ವಿಜಯದ ದಾಖಲೆಗೆ ಬ್ರೇಕ್ ಹಾಕಿರುವ ಏಂಜೆಲಿಕ್ ಕರ್ಬರ್, ಓಪನ್ ಟೆನಿಸ್ ಪಂದ್ಯದಲ್ಲಿ ಸ್ಟೆಫಿ ಗ್ರಾಫ್ ಅವರ 22 ಗ್ರಾಂಡ್ ಸ್ಲಾಮ್ ಟೈಟಲ್ಸ್ ಗಳನ್ನು ಸಮಾನವಾಗಿಸಿಕೊಳ್ಳುವ ಕನಸನ್ನು ಭಗ್ನಗೊಳಿಸಿದ್ದಾರೆ.
ಜರ್ಮನಿಯ ಏಂಜೆಲಿಕ್ ಕರ್ಬರ್, ಫೈನಲ್ ಪ್ರವೇಶಿಸಿದ ಮೊದಲ ಬಾರಿಗೇ ಆಸ್ಟ್ರೇಲಿಯನ್ ಓಪನ್ ಟೆನಿಸ್ ಫೈನಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಕಳೆದ ವರ್ಷ ಮೊದಲ ಸುತ್ತಿನಲ್ಲಿ ಸೋತಿದ್ದ ಏಂಜೆಲಿಕ್ ಕರ್ಬರ್,  1994 ರಲ್ಲಿ ಗ್ರಾಫ್ ಓಪನ್ ಟೆನಿಸ್ ಫೈನಲ್ ಗೆದ್ದ ನಂತರ ಇದೇ ಮೊದಲ ಬಾರಿಗೆ ಜರ್ಮನಿಯ ಮಹಿಳಾ ಆಟಗಾರ್ತಿ ಆಸ್ಟ್ರೇಲಿಯನ್ ಟೈಟಲ್ ನ್ನು ಮುಡಿಗೇರಿಸಿಕೊಂಡಿದ್ದಾರೆ.

SCROLL FOR NEXT