ಸೈನಾ ಮತ್ತು ಕೆ ಶ್ರೀಕಾಂತ್ (ಸಂಗ್ರಹ ಚಿತ್ರ) 
ಕ್ರೀಡೆ

ಆಸ್ಟ್ರೇಲಿಯನ್ ಓಪನ್: ಸೆಮೀಸ್‍ಗೆ ಸೈನಾ, ಶ್ರೀಕಾ೦ತ್

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್ ಹಾಗೂ ಕೆ.ಶ್ರೀಕಾ೦ತ್, ಆಸ್ಟ್ರೇಲಿಯನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿ೦ಟನ್ ಟೂನಿ೯ಯಲ್ಲಿ ಶುಕ್ರವಾರ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಸಿಡ್ನಿ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್ ಹಾಗೂ ಕೆ.ಶ್ರೀಕಾ೦ತ್, ಆಸ್ಟ್ರೇಲಿಯನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿ೦ಟನ್ ಟೂನಿ೯ಯಲ್ಲಿ ಶುಕ್ರವಾರ  ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಮಹಿಳಾ ಸಿ೦ಗಲ್ಸ್ ವಿಭಾಗದ 8ರ ಘಟ್ಟದ ಪ೦ದ್ಯದಲ್ಲಿ ಭಾರತದ ಸೈನಾ ನೆಹ್ವಾಲ್ ಅವರು 2013ರ ವಿಶ್ವ ಚಾ೦ಪಿಯನ್ ಥಾಯ್ಲೆ೦ಡ್‍ನ ಇ೦ಥೋನನ್ ರಚನಾಕ್ ವಿರುದ್ಧ  28-26, 21-16 ನೇರ ಸೆಟ್ ಗಳ ಅಂತರದಲ್ಲಿ ಜಯ ದಾಖಲಿಸಿದರು. ಬರೊಬ್ಬರ 56 ನಿಮಿಷಗಳ ಕಾಲ ನಡೆದ ಈ ಸೆಣಸಾಟದಲ್ಲಿ ಆರಂಭದಿಂದಲೂ ಸೈನಾ ನೆಹ್ವಾಲ್ ಮೇಲುಗೈ  ಸಾಧಿಸುವ ಮೂಲಕ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಶನಿವಾರ ನಡೆಯಲಿರುವ ಸೆಮಿಫೈನಲ್ ಪ೦ದ್ಯದಲ್ಲಿ ಸೈನಾ ಚೀನಾದ 4ನೇ ಶ್ರೇಯಾಂಕಿತೆ ವಾ೦ಗ್ ಯಿಹಾನ್‍ರನ್ನು  ಎದುರಿಸಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ  ಪುರುಷರ ಸಿ೦ಗಲ್ಸ್ ವಿಭಾಗದ ಕ್ವಾಟ೯ರ್ ಫೈನಲ್ ನಲ್ಲಿ ವಿಶ್ವ ನ೦.13 ಕಿಡಾಂಬಿ ಶ್ರೀಕಾ೦ತ್ 21-18, 21-17 ನೇರ ಸೆಟ್ ಗಳ ಅಂತರದಲ್ಲಿ ಗೆಲುವು ಸಾಧಿಸಿದರು.  ಕೇವಲ 36 ನಿಮಿಷಗಳ ಕದನದಲ್ಲಿ ಕೊರಿಯಾದ ಕ್ವಾ೦ಗ್ ಹೀ ಹಿಯೊರನ್ನು ಶ್ರೀಕಾಂತ್ ಮಣಿಸಿದರು. ಪಂದ್ಯದ ಯಾವುದೇ ಹಂತದಲ್ಲಿಯೂ ತಮ್ಮ ಹಿಡಿತ ಸಡಿಲಿಸದ ಶ್ರೀಕಾಂತ್  ಅಂತಿಮವಾಗಿ 21-18, 21-17  ನೇರೆ ಸೆಟ್ ಗಳ ಅಂತರದಲ್ಲಿ ಗೆದ್ದು ಬೀಗಿದರು. ಮು೦ದಿನ ಸುತ್ತಿನ ಪಂದ್ಯದಲ್ಲಿ ಶ್ರೀಕಾ೦ತ್ ಡೆನ್ಮಾಕ್‍೯ ಹಾನ್ಸ್ ಕ್ರಿಸ್ಟಿಯನ್ ವಿಟ್ಟಿ೦ಗ್‍ಹಸ್‍ರನ್ನು  ಎದುರಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ