ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯಾಕಪ್ ಟಿ20: ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶಕ್ಕೆ 5 ವಿಕೆಟ್ ಗಳ ಭರ್ಜರಿ ಜಯ

ಏಷ್ಯಾಕಪ್ ಟಿ20 ಟೂರ್ನಿ ನಿಮಿತ್ತ ಬುಧವಾರ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅತಿಥೇಯ ಬಾಂಗ್ಲಾದೇಶ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 3 Mar 2016, 12:49 pm

ಮೀರ್ ಪುರ: ಏಷ್ಯಾಕಪ್ ಟಿ20 ಟೂರ್ನಿ ನಿಮಿತ್ತ ಬುಧವಾರ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅತಿಥೇಯ ಬಾಂಗ್ಲಾದೇಶ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಕಳೆದ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಶ್ರೀಲಂಕಾಕ್ಕೆ ಆಘಾತ ನೀಡಿದ್ದ ಬಾಂಗ್ಲಾದೇಶ ತಂಡ, ಬುಧವಾರ 2009ರ ವಿಶ್ವಚಾಂಪಿಯನ್ ಪಾಕಿಸ್ತಾನ ತಂಡಕ್ಕೆ ಆಘಾತಕಾರಿ ಸೋಲು ನೀಡುವ ಮೂಲಕ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್​ಗೇರಿದೆ. 
ಶೇರ್ ಎ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಸರ್ಫ್ರಾಜ್ ಅಹ್ಮದ್ (58 ರನ್, 42 ಎಸೆತ, 5 ಬೌಂಡರಿ, 2 ಸಿಕ್ಸರ್) ಅವರ ಸಮಯೋಚಿತ ಆಟದಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್​ಗೆ 129 ರನ್ ಪೇರಿಸಿತ್ತು.ಈ ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ ಬಾಂಗ್ಲಾ 19.1 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ​ 131 ರನ್ ಬಾರಿಸಿ 5 ವಿಕೆಟ್​ಗಳಿಂದ ಗೆಲುವು ಸಾಧಿಸಿತು.

Advertisement

Advertisement

ಅಲ್ಪ ಮೊತ್ತ ಬೆನ್ನಟ್ಟಿದ ಬಾಂಗ್ಲಾ ತಂಡ ಸೌಮ್ಯ ಸರ್ಕಾರ್ 48 ರನ್ ಮತ್ತು ಮಹಮದುಲ ಅವರ ಅಜೇಯ 22 ರನ್ ನೆರವಿನಿಂದ ಇನ್ನೂ 5 ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.ಆ ಮೂಲಕ ಏಷ್ಯಾಕಪ್ ಸರಣಿಯ ಫೈನಲ್ ಗೆ ಬಾಂಗ್ಲಾದೇಶ ಅಡಿ ಇಟ್ಟಿದ್ದು, ಫೈನಲ್ ನಲ್ಲಿ ಭಾರತವನ್ನು ಎದುರಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement