ಅಪಘಾತಕ್ಕೀಡಾದ ಕಾರು ಮತ್ತು ರೇಸ್ ಗೆದ್ದ ರಾಸ್ ಬರ್ಗ್ 
ಕ್ರೀಡೆ

ವರ್ಷದ ಮೊದಲ ಫಾರ್ಮುಲಾ 1 ರೇಸ್ ಗೆದ್ದ ರಾಸ್‌ ಬರ್ಗ್

ಪ್ರಸಕ್ತ ಸಾಲಿನ ಮೊದಲ ಫಾರ್ಮುಲಾ ರೇಸ್ ಅನ್ನು ಮರ್ಸಿಡೀಸ್ ತಂಡದ ಚಾಲಕ ನಿಕೋ ರಾಸ್ ಬರ್ಗ್ ಜಯಿಸಿದ್ದಾರೆ...

ಮೆಲ್ಬೋರ್ನ್: ಪ್ರಸಕ್ತ ಸಾಲಿನ ಮೊದಲ ಫಾರ್ಮುಲಾ ರೇಸ್ ಅನ್ನು ಮರ್ಸಿಡೀಸ್ ತಂಡದ ಚಾಲಕ ನಿಕೋ ರಾಸ್ ಬರ್ಗ್ ಜಯಿಸಿದ್ದಾರೆ.

ಭಾನುವಾರ ಮೆಲ್ಬೋರ್ನ್ ನಲ್ಲಿ ನಡೆದ ರೇಸ್ ನಲ್ಲಿ ರಾಸ್ ಬರ್ಗ್ ಮೊದಲ ಸ್ಥಾನ ಗಳಿಸಿದರೆ, ಅದೇ ಮರ್ಸಿಡೀಸ್ ತಂಡದ ಮತ್ತೋರ್ವ ಖ್ಯಾತ ಚಾಲಕ ಲೂಯಿಸ್ ಹ್ಯಾಮಿಲ್ಟನ್ 2 ಸ್ಥಾನ  ಪಡೆದರು. ಈ ರೇಸ್ ನಲ್ಲಿ ರಾಸ್ ಬರ್ಗ್ ಒಟ್ಟು 57 ಲ್ಯಾಪ್ ಗಳನ್ನು 1: 48: 15.565 ಸೆಕೆಂಡ್ಸ್ ಗಳಲ್ಲಿ ಪೂರ್ಣಗೊಳಿಸಿ 25 ಪಾಯಿಂಟ್ಸ್ ಗಳಿಸಿದರೆ, ಲೂಯಿಸ್ ಹ್ಯಾಮಿಲ್ಟನ್ 18 ಅಂಕಗಳಿಸಿದರು.

ಪಂದ್ಯದ ಆರಂಭದಲ್ಲಿ 2 ಮತ್ತು 3 ನೇ ಗೇರ್ ನಲ್ಲಿ ಕಾರನ್ನು ನಿಧಾನವಾಗಿ ಚಲಾಯಿಸುತ್ತಿದ್ದ ಹ್ಯಾಮಿಲ್ಟನ್ ತಮ್ಮದೇ ಯಡವಟ್ಟಿನಿಂದಾಗಿ ಹ್ಯಾಮಿಲ್ಟನ್ ಎರಡನೇ ಸ್ಥಾನಕ್ಕೆ ತೃಪ್ತಿ  ಪಡುವಂತಾಯಿತು. ಇನ್ನು ಫೆರಾರಿ ತಂಡ ಸೆಬಾಸ್ಟಿಯನ್ ವೆಟ್ಟಲ್ ಮೂರನೇ ಸ್ಥಾನ ಪಡೆದರೆ, ಫೋರ್ಸ್ ಇಂಡಿಯಾದ ಚಾಲಕ ನಿಕೋ ಹೆಲ್ಕನ್ ಬರ್ಗ್ 7ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.

ಭೀಕರ ಅಪಘಾತಕ್ಕೆ ಸಾಕ್ಷಿಯಾದ ರೇಸ್
ಇನ್ನು ಇದೇ ರೇಸ್ ನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ರೇಸ್‌ನ 18ನೇ ಚರಣದ ವೇಳೆ ಮೆಕ್ಲಾರೆನ್ ತಂಡದ ಚಾಲಕ ಫರ್ನಾಂಡೋ ಅಲಾನ್ಸೊ, ಹಾಸ್ ಎಫ್ 1 ತಂಡದ ಈಸ್ಟ್  ಬೆನ್ ಗುಟಾರೆಜ್ ಕಾರಿಗೆ ಡಿಕ್ಕಿ ಹೊಡೆದರು. ಆದರೆ ಅಲಾನ್ಸೋ ಪವಾಡಸದೃಶವಾಗಿ ಪಾರಾದರು. ಕೂಡಲೇ ಅವರನ್ನು ಪ್ರಥಮ ಚಿಕಿತ್ಸೆಗೆ ಕೊಂಡೊಯ್ಯಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ: RCB ಗೆ 18 ರನ್ ಗಳ ಭರ್ಜರಿ ಗೆಲುವು!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

SCROLL FOR NEXT