ಸಂಗೀತ ನಿರ್ದೇಶಕ ಎರ್ ಆರ್ ರೆಹಮಾನ್ (ಸಂಗ್ರಹ ಚಿತ್ರ) 
ಕ್ರೀಡೆ

ಭಾರತ ಒಲಿಂಪಿಕ್ಸ್ ತಂಡಕ್ಕೆ ರಾಯಭಾರಿಯಾದ ಎಆರ್ ರೆಹಮಾನ್

ರಿಯೊ ಒಲಿಪಿಂಕ್ಸ್ ಗೆ ಭಾರತ ತಂಡದ ಸಿದ್ಧತೆ ಭರ್ಜರಿಯಾಗಿ ನಡೆದಿರುವಂತೆಯೇ ತಂಡದ ಮೂರನೇ ರಾಯಭಾರಿಯಾಗ ಖ್ಯಾತ ಸಂಗೀತ ನಿರ್ದೇಶಕ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ಎಆರ್ ರೆಹಮಾನ್ ಅವರು ಆಯ್ಕೆಯಾಗಿದ್ದಾರೆ...

ಮುಂಬೈ: ರಿಯೊ ಒಲಿಪಿಂಕ್ಸ್ ಗೆ ಭಾರತ ತಂಡದ ಸಿದ್ಧತೆ ಭರ್ಜರಿಯಾಗಿ ನಡೆದಿರುವಂತೆಯೇ ತಂಡದ ಮೂರನೇ ರಾಯಭಾರಿಯಾಗ ಖ್ಯಾತ ಸಂಗೀತ ನಿರ್ದೇಶಕ ಮತ್ತು ಆಸ್ಕರ್ ಪ್ರಶಸ್ತಿ  ವಿಜೇತ ಎಆರ್ ರೆಹಮಾನ್ ಅವರು ಆಯ್ಕೆಯಾಗಿದ್ದಾರೆ.

ಭಾರತ ಒಲಿಂಪಿಕ್ಸ್ ಸಂಸ್ಥೆ ಗುರುವಾರ ಸ೦ಗೀತ ನಿರ್ದೇಶಕ ಎಆರ್ ರೆಹಮಾನ್‍ರನ್ನು ರಿಯೋ ಒಲಿ೦ಪಿಕ್ಸ್ ಗೆ ತೆರಳಿರುವ ಭಾರತೀಯ ನಿಯೋಗದ ಸದ್ಭಾವನಾ ರಾಯಭಾರಿಯನ್ನಾಗಿ  ನೇಮಿಸಿದೆ. ಈಗಾಗಲೇ ನಟ ಸಲ್ಮಾನ್ ಖಾನ್, ಕ್ರಿಕೆಟ್ ದಿಗ್ಗಜ ಸಚಿನ್ ತೆ೦ಡುಲ್ಕರ್ ಮತ್ತು ಶೂಟರ್ ಅಭೀನವ್ ಬಿ೦ದ್ರಾ ನಿಯೋಗದ ಸದ್ಭಾವನಾ ರಾಯಭಾರಿಯನ್ನಾಗಿ ನೇಮಕ  ಮಾಡಲಾಗಿದ್ದು, ಇವರೊಂದಿಗೆ ರೆಹಮಾನ್ ರನ್ನು ಕೂಡ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರೆಹಮಾನ್ ರನ್ನು ಭಾರತ ಒಲಿಂಪಿಕ್ಸ್ ತಂಡ ರಾಯಭಾರಿಯನ್ನಾಗಿ ಮಾಡುವ ಪ್ರಸ್ತಾಪ ಇತ್ತಾದರೂ ಈ ವರೆಗೂ ಅವರಿಂದ ಒಪ್ಪಿಗೆ ದೊರೆತಿರಲಿಲ್ಲ. ಗುರುವಾರ ರೆಹಮಾನ್‍ ಅವರು  ರಾಯಭಾರಿಯಾಗದಲು ಒಪ್ಪಿಗೆ ನೀಡಿದ್ದಾರೆ ಎಂದು ಐಒಎ ಹೇಳಿದೆ. ಅಲ್ಲದೆ, ತಮ್ಮ ಪ್ರಖ್ಯಾತ ವ೦ದೇ ಮಾತರ೦ ಆಲ್ಬ೦ನ "ಮಾ ತುಜೇ ಸಲಾ೦' ಗೀತೆಯನ್ನು ಬಳಸಿಕೊಳ್ಳಲು ಐಒಎಗೆ  ರೆಹಮಾನ್ ಅನುಮತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!