ಮಾಜಿ ಎಫ್1 ಚಾಂಪಿಯನ್ ಮೈಕೆಲ್ ಶೂಮಾಕರ್ (ಸಂಗ್ರಹ ಚಿತ್ರ) 
ಕ್ರೀಡೆ

ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮಾಜಿ ಎಫ್ 1 ಲೆಜೆಂಡ್ ಶೂಮಾಕರ್

ಮಾಜಿ ಫಾರ್ಮುಲಾ ಒನ್ ರೇಸ್ ಚಾಂಪಿಯನ್ ಮೈಕೆಲ್ ಶೂಮಾಕರ್ ಅವರು ವೈದ್ಯರ ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾರೆ ಎಂದು ಅವರ ಮಾಜಿ ಗುರು ಲುಕಾ ಮಾಂಟೆಜೆಮೊಲೊ ತಿಳಿಸಿದ್ದಾರೆ.

ನವದೆಹಲಿ: ಮಾಜಿ ಫಾರ್ಮುಲಾ ಒನ್ ರೇಸ್ ಚಾಂಪಿಯನ್ ಮೈಕೆಲ್ ಶೂಮಾಕರ್ ಅವರು ವೈದ್ಯರ ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾರೆ ಎಂದು ಅವರ ಮಾಜಿ ಗುರು ಲುಕಾ ಮಾಂಟೆಜೆಮೊಲೊ  ತಿಳಿಸಿದ್ದಾರೆ.

ಫೆರಾರಿ ತಂಡವನ್ನು ಪ್ರತಿನಿಧಿಸುತ್ತಿದ್ದ 47 ರ ಹರೆಯದ 7 ಬಾರಿಯ ವಿಶ್ವ ಫಾರ್ಮುಲಾ ಒನ್ ರೇಸ್ ಚಾಂಪಿಯನ್ ಶೂಮಾಕರ್ 2013 ರಲ್ಲಿ ಫ್ರಾನ್ಸ್​ನಲ್ಲಿ ಸ್ಕೈಯಿಂಗ್(ಹಿಮ ಕ್ರೀಡೆ) ಮಾಡುವ  ವೇಳೆ ಆಯತಪ್ಪಿ ಕಲ್ಲಿನ ಬಂಡೆಗೆ ತಲೆ ಬಡಿದು ಕೋಮಾ ಸ್ಥಿತಿಗೆ ತೆರಳಿದ್ದರು. ಸತತ 2 ವರ್ಷಗಳ ಚಿಕಿತ್ಸೆ ಬಳಿಕ ಇದೀಗ ಕೋಮಾದಿಂದ ಹೊರಬಂದಿರುವ ಶೂಮಾಕರ್ ಚಿಕಿತ್ಸೆಗೆ  ಸ್ಪಂಧಿಸುತ್ತಿದ್ದು, ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿರುವ ಅವರ ಮಾಜಿ ಗುರು ಲುಕಾ ಮಾಂಟೆಜೆಮೊಲೊ ಅವರು ಶೂಮಾಕರ್ ಚೇತರಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಆದಷ್ಟು ಬೇಗ ಸಹಜ  ಸ್ಥಿತಿಗೆ ಶೂಮಾಕರ್ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶೂಮಾಕರ್ 6 ತಿಂಗಳು ಆಸ್ಪತ್ರೆಯಲ್ಲಿ ಕಳೆದ ನಂತರ ಸ್ವಿಟ್ಜರ್ಲೆಂಡ್​ನಲ್ಲಿರುವ ಅವರ ಮನೆಗೆ ಸ್ಥಳಾಂತರಿಸಲಾಗಿತ್ತು. ಮನೆಯಲ್ಲಿಯೂ ಕೂಡ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!