ಕ್ರೀಡೆ

ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ದೀಪಾ ಮಲಿಕ್ ಹರ್ಯಾಣ ಸರ್ಕಾರದಿಂದ 4 ಕೋಟಿ ರು. ಹಣ, ಸರ್ಕಾರಿ ಉದ್ಯೋಗ

Shilpa D

ಚಂಡೀಘಡ:  ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯರ ಶಾಟ್‌ಪಟ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ದೀಪಾ ಮಲಿಕ್ ಗೆ ಹರ್ಯಾಣ ಸರ್ಕಾರ, 4 ಕೋಟಿ ರು ಹಣ ಮತ್ತು ಸರ್ಕಾರಿ ಉದ್ಯೋಗದ ಘೋಷಣೆ ಮಾಡಿದೆ,

ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೀಪೈ ಮಲಿಕ್ ಅವರನ್ನು ಸ್ವಾಗತಿಸಿದ ಹರ್ಯಾಣ ಯುವಜನ ಸೇವಾ ವ್ಯವಹಾರಗಳ ಸಚಿವ ಅನಿಲ್ ವಿಜ್, ಇಡೀ ರಾಷ್ಟ್ರವೇ ಹರ್ಯಾಣದ ಬಗ್ಗೆ ಹೆಮ್ಮೆ ಪಡುವಂತ ಮಾಡಿದ ದೀಪಾ ಅವರಿಗೆ ಸರ್ಕಾರ 4 ಕೋಟಿ ರು ಬಹುಮಾನ ಮತ್ತು ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದಾರೆ.

17 ವರ್ಷಗಳ ಹಿಂದೆ ಹರಿಯಾಣದ ದೀಪಾ ಮಲಿಕ್ ಅವರು ಬೆನ್ನುಹುರಿಯ ಗಡ್ಡೆಯ ಸಮಸ್ಯೆಯಿಂದ ಬಳಲಿದ್ದರು. ಗಡ್ಡೆ  ಯ ನ್ನು ತೆಗೆಯಲು 31 ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅವರ ದೇಹದಲ್ಲಿ ಒಟ್ಟು 183 ಹೊಲಿಗೆಗಳನ್ನು ಹಾಕಲಾಗಿತ್ತು. ಆದರೂ ಸೊಂಟದಿಂದ ಪಾದದವರೆಗಿನ ಚೈತನ್ಯ ಕಳೆದು ಕೊಂಡಿದ್ದರು.

SCROLL FOR NEXT