ರಾಫೆಲ್ ನಡಾಲ್ ಹಾಗೂ ಲಿಯಾಂಡರ್ ಪೇಸ್ (ಸಂಗ್ರಹ ಚಿತ್ರ) 
ಕ್ರೀಡೆ

ಪೇಸ್ ವಿಶ್ವದ ಅತ್ಯುತ್ತಮ ಟೆನ್ನಿಸ್ ಆಟಗಾರರಲ್ಲಿ ಒಬ್ಬರು: ರಾಫೆಲ್ ನಡಾಲ್

ವಿಶ್ವದ ಅತ್ಯುತ್ತಮ ಟೆನ್ನಿಸ್ ಆಟಗಾರರಲ್ಲಿ ಭಾರತದ ಲಿಯಾಂಡರ್ ಪೇಸ್ ಒಬ್ಬರು ಎಂದು ಸ್ಪೈನ್ ನ ಆಟಗಾರ ರಾಫೆಲ್ ನಡಾಲ್ ಹೇಳಿದ್ದಾರೆ.

ನವದೆಹಲಿ: ವಿಶ್ವದ ಅತ್ಯುತ್ತಮ ಟೆನ್ನಿಸ್ ಆಟಗಾರರಲ್ಲಿ ಭಾರತದ ಲಿಯಾಂಡರ್ ಪೇಸ್ ಒಬ್ಬರು ಎಂದು ಸ್ಪೈನ್ ನ ಆಟಗಾರ ರಾಫೆಲ್ ನಡಾಲ್ ಹೇಳಿದ್ದಾರೆ.

ಡೇವಿಸ್ ಕಪ್ ಪ್ಲೇಆಫ್ ಸುತ್ತಿನಲ್ಲಿ ಶನಿವಾರ ಭಾರತ ತಂಡದ ವಿರುದ್ಧ ನಡೆದ ಪಂದ್ಯ ಜಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ನಡಾಲ್, ಲಿಯಾಂಡರ್ ಪೇಸ್ ಡಬಲ್ಸ್ ನಲ್ಲಿ ಅದ್ಬುತ  ಆಟಗಾರ. ಅಂತೆಯೇ ಟೆನಿಸ್ ಲೋಕದ ದಿಗ್ಗಜ ಆಟಗಾರ ಎಂದು ಬಣ್ಣಿಸಿದ್ದಾರೆ.

ಪ್ಲೇ ಆಫ್ ಸುತ್ತಿನಲ್ಲಿ ಭಾರತ ಸೋತಿತಾದರೂ, ಆ ಪಂದ್ಯ ನಿಜಕ್ಕೂ ರೋಚಕವಾಗಿತ್ತು. ಪ್ರಮುಖವಾಗಿ ಭಾರತ ತಂಡದ ಲಿಯಾಂಡರ್ ಪೇಸ್ ನಮಗೆ ನಿಜಕ್ಕೂ ಪ್ರಬಲ ಎದುರಾಳಿಯಾಗಿದ್ದರು.  ಟೆನ್ನಿಸ್ ಲೋಕದ ದೊಡ್ಡ ತಾರೆಗಳಲ್ಲಿ ಪೇಸ್ ಕೂಡ ಒಬ್ಬರು. ಅವರೊಂದಿಗೆ ಕೋರ್ಟ್ ಹಂಚಿಕೊಂಡಿದ್ದು ನನಗೆ ನಿಜಕ್ಕೂ ಗೌರವದ ಕ್ಷಣವಾಗಿತ್ತು ಎಂದು 14 ಬಾರಿ ಗ್ರಾಂಡ್ ಸ್ಲಾಮ್ ಚಾಂಪಿಯನ್  ನಡಾಲ್ ಹೇಳಿದ್ದಾರೆ.

ಡೇವಿಸ್ ಕಪ್ ನಿಮಿತ್ತ ಶನಿವಾರ ನಡೆದ ಪುರುಷರ ಫೈನಲ್ ಪಂದ್ಯದಲ್ಲಿ ಭಾರತ ಲಿಯಾಂಡರ್ ಪೇಸ್ ಹಾಗೂ ಸಾಕೇತ್ ಮೈನೇನಿ ಅವರು ಸ್ಪೈನ್ ನ ರಾಫೆಲ್ ನಡಾಲ್, ಮಾರ್ಕ್ ಲೊಪೇಜ್  ವಿರುದ್ಧ 4-6, 7-6 (2), 6-4, 6-4 ಸೆಟ್ ಗಳ ಅಂತರದಿಂದ ಸೋತಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT