ಕ್ರೀಡೆ

ತಂಡದ ಉತ್ತಮ ಪ್ರದರ್ಶನಕ್ಕೆ ಸಂಘಟಿತ ನಾಯಕತ್ವ ಸಹಕಾರಿ: ಹಾಕಿ ತಂಡದ ನಾಯಕ ಶ್ರೀಜೇಶ್

Srinivas Rao BV

ಬೆಂಗಳೂರು: ತಂಡ ಉತ್ತಮ ಪ್ರದರ್ಶನ ನೀಡುವುದಕ್ಕೆ ಸಂಘಟಿತ ನಾಯಕತ್ವವೂ ಸಹಕಾರಿ ಎಂದು ಭಾರತ ಹಾಕಿ ತಂಡದ ನಾಯಕ ಶ್ರೀಜೇಶ್ ಅಭಿಪ್ರಾಯಪಟ್ಟಿದ್ದಾರೆ.

ಸಂಘಟಿತ ನಾಯಕತ್ವ ತಂಡದ ಪ್ರತಿಯೊಬ್ಬ ಆಟಗಾರನಿಗೂ ತಮ್ಮ ಜವಾಬ್ದಾರಿಯನ್ನು ಅರಿತು ಕ್ರೀಡೆ ಮೇಲೆ ಗಮನ ಕೇಂದ್ರೀಕರಿಸಲು ನೆರವಾಗಲಿದೆ, ನನ್ನ ಮಟ್ಟಿಗೆ ಸಂಘಟಿತ ನಾಯಕತ್ವ ಗೋಲ್ ಕೀಪಿಂಗ್ ನತ್ತ ಹೆಚ್ಚು ಗಮನ ಕೇಂದ್ರೀಕರಿಸಲು ಸಹಕಾರಿಯಾಗಿದೆ ಎಂದು ಶ್ರೀಜೇಶ್ ಹೇಳಿದ್ದಾರೆ.

ತಮಗೆ ಗೋಲ್ ಕೀಪಿಂಗ್ ನತ್ತ ಹೆಚ್ಚು ಗಮನ ಕೇಂದ್ರೀಕರಿಸಲು ಸಾಧ್ಯವಾಗುವಂತೆ ಸಂಘಟಿತ ನಾಯಕತ್ವದಿಂದ ಉಳಿದ ಆಟಗಾರರಿಗೆ ಅವರಿಗೆ ವಹಿಸಿರುವ ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸಬಹುದು. ಹಾಕಿ ವ್ಯಕ್ತಿಗತವಾಗಿ ನಡೆಯುವ ಕ್ರೀಡೆ. ಅದು ತಂಡದ ಸಂಘಟಿತ ಬಲದಿಂದ ನಡೆಯುವ ಕ್ರೀಡೆ, ತಂಡದ ನಾಯಕನ ಮೇಲೆ ಮಾತ್ರವೇ ಇಡೀ ಕ್ರೀಡೆ ಅವಲಂಬಿತವಾಗಿರುವುದಿಲ್ಲ ಎಂದು ಶ್ರೀಜೇಶ್ ತಿಳಿಸಿದ್ದಾರೆ.

ಕಾಮನ್ ವೆಲ್ತ್ ಕ್ರೀಡಾಕೂಟಗಳಂತಹ ಕ್ರೀಡಾಕೂಟಗಳನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ತಯಾರು ಮಾಡಲಾಗುತ್ತದೆ. ಡಿಫೆಂಡರ್ ಬೀರೇಂದ್ರ ಲಕ್ರಾ ಗಾಯದ ಸಮಸ್ಯೆಯಿಂದ ರಿಯೋ ಒಲಂಪಿಕ್ಸ್ ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೆ ಅವರ ಬದಲು ಹರ್ಮನ್ ಪ್ರೀತ್ ಸಿಂಗ್ ಸುರೇಂದ್ರರ ಕುಮಾರ್ ಇದ್ದರು ಅವರು ರಿಯೋ ಒಲಂಪಿಕ್ಸ್ ನಲ್ಲಿ ಆಡುವ ಅವಕಾಶವನ್ನು ಉತ್ತಮ ಸದುಪಯೋಗಪಡಿಸಿಕೊಂಡರು ಎಂದು ಶ್ರೀಜೇಶ್ ಹೇಳಿದ್ದಾರೆ.

SCROLL FOR NEXT