ಸಂಗ್ರಹ ಚಿತ್ರ 
ಕ್ರೀಡೆ

ಅಜ್ಲಾನ್ ಶಾ ಹಾಕಿ ಟೂರ್ನಿ; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 3-0 ಭರ್ಜರಿ ಜಯ

ಮಲೇಷ್ಯಾದ ಇಪೋನಲ್ಲಿ ನಡೆಯುತ್ತಿರುವ ಸುಲ್ತಾನ್ ಅಜ್ಲಾನ್ ಶಾ ಹಾಕಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ.

ಇಪೋ: ಮಲೇಷ್ಯಾದ ಇಪೋನಲ್ಲಿ ನಡೆಯುತ್ತಿರುವ ಸುಲ್ತಾನ್ ಅಜ್ಲಾನ್ ಶಾ ಹಾಕಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ.

ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಪಂದ್ಯದ 23ನೇ ನಿಮಿಷದಲ್ಲಿ ಮನ್ ದೀಪ್ ಸಿಂಗ್ ಮೊದಲ ಗೋಲು ಗಳಿಸಿ ತಂಡಕ್ಕೆ  ಉತ್ತಮ ಆರಂಭ ನೀಡಿದರು. ಹಾಫ್ ಟೈಮ್ ಗೂ ಕೆಲವೇ ಕ್ಷಣಗಳ ಮೊದಲು ಡಿಫೆಂಡರ್ ಹರ್ಮನ್ ಪ್ರೀತ್ ಸಿಂಗ್ ಅವರು ಮತ್ತೊಂದು ಗೋಲು ಗಳಿಸುವ ಮೂಲಕ ಭಾರತದ ಮುನ್ನಡೆಯನ್ನು ದುಪ್ಪಟ್ಟಾಗಿಸಿದರು.  ಮೊದಲ ಗೋಲು  ಗಳಿಸಿದ ಮನ್ ದೀಪ್ ಸಿಂಗ್ ಅದೇ ಹುರುಪಿನಲ್ಲಿ ಮನ್ ದೀಪ್ ಸಿಂಗ್ 47 ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿದರು.  ಅ ಮೂಲಕ ಭಾರತ 3-0 ಅಂತರದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಸಾಧಿಸಿತು.

ಬ್ರಿಟನ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 2-2 ಅಂತರದಲ್ಲಿ ಡ್ರಾಮಾಡಿಕೊಂಡಿತ್ತು. ಮುಂದಿನ ಪಂದ್ಯದಲ್ಲಿ ಭಾರತ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ಎದುರು ಸೆಣಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ: ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ; BJP ಹೋರಾಟಕ್ಕೆ ಜಯ!

ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ; ಬನ್ನಿ ಅಖಾಡಕ್ಕೆ, ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್‌ಗಳು: ರಾಮುಲು, ರೆಡ್ಡಿಗೆ ನಾಗೇಂದ್ರ ಸವಾಲು

ಹುಬ್ಬಳ್ಳಿ: ಹಾಡಹಗಲೇ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ; ಭಯಾನಕ ವಿಡಿಯೋ ವೈರಲ್‌

ಹೂಡಿಕೆ ಆಕರ್ಷಣೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ: ಕೈಗಾರಿಕಾ ಅಭಿವೃದ್ಧಿಗೆ 5 ನಗರಗಳನ್ನು ಗುರುತಿಸಲು ಅಧಿಕಾರಿಗಳಿಗೆ CM DK Shivakumar ನಿರ್ದೇಶನ

ವಾಲ್ಮೀಕಿ ಹಗರಣದ 'ಕಿಂಗ್ ಪಿನ್' ನಾಗೇಂದ್ರ ಔಟ್: ಜನಾಕ್ರೋಶದ ಮುಂದೆ ಮಂಡಿಯೂರಿ ಶರಣಾದ ಭ್ರಷ್ಟ ಕಾಂಗ್ರೆಸ್ ಸರ್ಕಾರ! ಬಿಜೆಪಿ