ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಪದಕ ಬೇಟೆ!

ದಕ್ಷಿಣ ಆಫ್ರಿಕಾದ ಜೋಹನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಈ ವರೆಗೂ ಭಾರತೀಯ ಕುಸ್ತಿ ಪಟುಗಳು ಒಟ್ಟು 9 ಚಿನ್ನ ಮತ್ತು 7 ಬೆಳ್ಳಿ ಪದಕ ಪಡೆದಿದ್ದಾರೆ.

ಸಂಗ್ರಹ ಚಿತ್ರ
Srinivasa Murthy VN
Updated On : 17 Dec 2017, 1:23 am
ಜೊಹನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಜೋಹನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ರೆಸ್ಲಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಈ ವರೆಗೂ ಭಾರತೀಯ ಕುಸ್ತಿ ಪಟುಗಳು ಒಟ್ಟು 9 ಚಿನ್ನ  ಮತ್ತು 7 ಬೆಳ್ಳಿ ಪದಕ ಪಡೆದಿದ್ದಾರೆ.
ಟೂರ್ನಿ ಎಲ್ಲ 10 ವಿಭಾಗಗಳಲ್ಲಿಯೂ ಭಾರತ ಮಹಿಳಾ ತಂಡ ಪದಕಗಳನ್ನು ಕೊರಳಿಗೆ ಹಾಕಿಸಿಕೊಂಡಿದ್ದು, 65 ಕೆಜಿ ವಿಭಾಗದ ಕುಸ್ತಿ ವಿಭಾಗದಲ್ಲಿ ರಿತು ಮಲ್ಲಿಕ್, 68 ಕೆಜಿ ವಿಭಾಗದಲ್ಲಿ ದಿವ್ಯಾ ಕಕ್ರಣ್ ಮತ್ತು 72 ಕೆಜಿ ವಿಭಾಗದಲ್ಲಿ ಕಿರಣ್  ಅವರು ಚಿನ್ನದ ಗೆದ್ದಿದ್ದು, 59 ಕೆಜೆ ವಿಭಾಗದಲ್ಲಿ ರವಿತಾ ಮತ್ತು 76 ಕೆಜಿ ವಿಭಾಗದಲ್ಲಿ ಪೂಜಾ ಬೆಳ್ಳಿ ಪದಕ ಪಡೆದಿದ್ದಾರೆ. 
ಇನ್ನುಳಿದಂತೆ 76 ಕೆಜಿ ವಿಭಾಗದಲ್ಲಿ ಕವಿತಾ ಮತ್ತು 72 ಕೆಜಿ ವಿಭಾಗದಲ್ಲಿ ತೋಮರ್ ಕಂಚಿನ ಪದಕ ಗೆದ್ದಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement