ಕ್ರಿಕೆಟಿಗ ಸೆಹ್ವಾಗ್ ಬಳಿಕ ಗುರ್'ಮೆಹರ್ ಕೌರ್'ಗೆ ತಿರುಗೇಟು ನೀಡಿದ ಯೋಗೇಶ್ವರ್ ದತ್ 
ಕ್ರೀಡೆ

ಕ್ರಿಕೆಟಿಗ ಸೆಹ್ವಾಗ್ ಬಳಿಕ ಗುರ್'ಮೆಹರ್ ಕೌರ್'ಗೆ ತಿರುಗೇಟು ನೀಡಿದ ಯೋಗೇಶ್ವರ್ ದತ್

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಬಳಿಕ ಕುಸ್ತಿ ಪಟು ಯೋಗೇಶ್ವರ್ ದತ್ ಅವರೂ ಕೂಡ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್'ಮೆಹರ್ ಕೌರ್ ಅವರಿಗೆ ಮಂಗಳವಾರ ತಿರುಗೇಟು...

ನವದೆಹಲಿ: ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಬಳಿಕ ಕುಸ್ತಿ ಪಟು ಯೋಗೇಶ್ವರ್ ದತ್ ಅವರೂ ಕೂಡ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್'ಮೆಹರ್ ಕೌರ್ ಅವರಿಗೆ ಮಂಗಳವಾರ ತಿರುಗೇಟು ನೀಡಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಗುರ್'ಮೆಹರ್ ಅವರು ನನ್ನ ತಂದೆ ಸಾವಿಗೆ ಪಾಕಿಸ್ತಾನ ಕಾರಣವಲ್ಲ, ಯುದ್ಧವೇ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಸೆಹ್ವಾಗ್ ಅವರು, ಎರಡು ಬಾರಿ ತ್ರಿಶತಕ ಬಾರಿಸಿದ್ದು ನಾನಲ್ಲ, ನನ್ನ ಬ್ಯಾಟ್ ಎಂದು ಟ್ವಿಟರ್ ಪೋಸ್ಟ್ ಹಾಕಿ ತಿರುಗೇಟು ನೀಡಿದ್ದರು. 
ಇದೀಗ ಯೋಗೇಶ್ವರ್ ದತ್ ಅವರೂ ಕೂಡ ಗುರ್'ಮೆಹರ್ ಅವರ ಪೋಸ್ಟ್ ಗೆ ವಿರೋಧ ವ್ಯಕ್ತಪಡಿಸಿದ್ದು, ಹಿಟ್ಲರ್, ಒಸಾಮಾ ಬಿನ್ ಲಾಡೆನ್ ಹಾಗೂ ಸಲ್ಮಾನ್ ಅವರು ಹತ್ಯೆ ಮಾಡಿದ್ದ ಕೃಷ್ಣ ಮೃಗಗಳನ್ನು ಫೋಟೋಗಳನ್ನು ಹಾಕಿ ತಿರುಗೇಟು ನೀಡಿದ್ದಾರೆ. 
ಹಿಟ್ಲರ್, ಒಸಾಮಾ ಬಿನ್ ಲಾಡೆನ್ ಹಾಗೂ ಸಲ್ಮಾನ್ ಅವರು ಹತ್ಯೆ ಮಾಡಿದ್ದ ಕೃಷ್ಣ ಮೃಗ ಫೋಟೋಗಳನ್ನು ಒಂದು ಫೋಟೋದಲ್ಲಿ ಜೋಡಣೆ ಮಾಡಿ ಯೋಗೇಶ್ವರ್ ದತ್ ಹಾಕಿದ್ದಾರೆ.
ಒಂದು ಫೋಟೋದಲ್ಲಿ ಗುರ್ ಮೆಹರ್ ಅವರು ತಮ್ಮ ತಂದೆ ಸಾವಿಗೆ ಪಾಕಿಸ್ತಾನವಲ್ಲ, ಯುದ್ಧವೇ ಕಾರಣ ಎಂಬ ಫೋಟೋ ಇದೆ. ಮತ್ತೊಂದು ಭಾಗದಲ್ಲಿ ಹಿಟ್ಲರ್ ಇದ್ದು ಆ ಫೋಟೋದಲ್ಲಿ ನಾನು ಯಹೂದಿಗಳನ್ನು ಸಾಯಿಸಲಿಲ್ಲ, ವಿಷ ಅನಿಲ ಸಾಯಿಸಿತ್ತು. ಮೂರನೇ ಫೋಟೋದಲ್ಲಿ ಒಸಾಮಾ ಬಿನ್ ಲಾಡನ್ ಇದ್ದು, ನಾನು ಜನರನ್ನು ಸಾಯಿಸಲಿಲ್ಲ. ಬಾಂಬ್ ಗಳು ಸಾಯಿಸಿತ್ತು. ನಾಲ್ಕನೇ ಫೋಟೋದಲ್ಲಿ ಸಲ್ಮಾನ್ ಖಾನ್ ಅವರ ಹತ್ಯೆ ಮಾಡಿದ್ದ ಕೃಷ್ಣಮೃಗ ಇದ್ದು, ಸಲ್ಮಾನ್ ಬಾಯ್ ನನ್ನನ್ನು ಸಾಯಿಸಲಿಲ್ಲ, ಗನ್ ನಲ್ಲಿದ್ದ ಗುಂಡು ನನ್ನ ಹತ್ಯೆ ಮಾಡಿತ್ತು ಎಂದು ಬರೆಯಲಾಗಿದೆ. ಈ ಫೋಟೋವನ್ನು ಟ್ವಿಟರ್ ನಲ್ಲಿ ಹಾಕುವ ಮೂಲಕ ಗುರ್'ಮೆಹರ್ ಕೌರ್ ಅವರ ಪೋಸ್ಟ್ ಗೆ ಯೋಗೇಶ್ವರ್ ದತ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT