ಕ್ರೀಡೆ

ಐಎಸ್ಎಸ್ಎಫ್ ವಿಶ್ವಕಪ್: ಶೂಟಿಂಗ್‍ನಲ್ಲಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ ಜೀತು ರಾಯ್

Lingaraj Badiger
ನವದೆಹಲಿ: ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡೆ ಫೆಡರೇಷನ್(ಐಎಸ್ಎಸ್ಎಫ್) ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಜೀತು ರಾಯ್ ಅವರು 50 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಇಂದು ನಡೆದ ಫೈನಲ್​ನಲ್ಲಿ ಜೀತು ರಾಯ್ 230.1 ಅಂಕ ಕಲೆ ಹಾಕಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಹಳದಿ ಪದಕ ತಂದುಕೊಟ್ಟಿದ್ದಾರೆ. ಅಮನ್​ಪ್ರೀತ್ ಸಿಂಗ್ 226.9 ಅಂಕ ಗಳಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರೆ, ಇರಾನ್​ನ ವಾಹಿದ್ ಗೋಲ್ಕಂದನ್ 208.0 ಅಂಕ ಕಲೆಹಾಕಿ ಕಂಚಿನ ಪದಕ ಜಯಿಸಿದರು.
ಇನ್ನು ಇದೇ ಮೊದಲ ಬಾರಿಗೆ ಐಎಸ್ಎಸ್ಎಫ್ ವಿಶ್ವಕಪ್ ನಲ್ಲಿ ಮಿಶ್ರ ಡಬಲ್ಸ್ ಶೂಟಿಂಗ್ ಸ್ಪರ್ಧೆಯನ್ನು ಪರಿಚಯಿಸಲಾಗಿದ್ದು ಇದರಲ್ಲಿ ಜೀತು ರಾಯ್ ಮತ್ತು ಹೀನಾ ಸಿಧು ಚಿನ್ನದ ಪದಕ ಗೆದ್ದಿದ್ದಾರೆ.
ಈ ಮೊದಲು 2014ರಲ್ಲಿ ಮ್ಯೂನಿಚ್​ನಲ್ಲಿ ನಡೆದ ಐಎಸ್​ಎಸ್​ಎಫ್ ವಿಶ್ವಕಪ್​ನಲ್ಲಿ ಜೀತು ರಾಯ್ 10 ಮೀ.ಏರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಅದೇ ವರ್ಷ ಮರಿಬಾರ್ ವಿಶ್ವಕಪ್ ಪಂದ್ಯಾವಳಿಯಲ್ಲಿ 50 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಮತ್ತು 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು.
SCROLL FOR NEXT