ಸಂಗ್ರಹ ಚಿತ್ರ 
ಕ್ರೀಡೆ

ಸುರೇಶ್ ಕಲ್ಮಾಡಿ, ಅಭಯ್ ಚೌಟಾಲಾ ನೇಮಕ ಅನೂರ್ಜಿತಗೊಳಿಸಿದ ಐಒಎ!

ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಛೆಗೆ ನೇಮಕವಾಗಿದ್ದ ಕಾಮನ್ ವೆಲ್ತ್ ಹಗರಣದ ಕುಖ್ಯಾತಿಯ ಸುರೇಶ್ ಕಲ್ಮಾಡಿ ಮತ್ತು ಅಭಯ್ ಚೌಟಾಲಾ ಅವರ ನೇಮಕವನ್ನು ಐಎಒ ಅನೂರ್ಜಿತಗೊಳಿಸಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಛೆಗೆ ನೇಮಕವಾಗಿದ್ದ ಕಾಮನ್ ವೆಲ್ತ್ ಹಗರಣದ ಕುಖ್ಯಾತಿಯ ಸುರೇಶ್ ಕಲ್ಮಾಡಿ ಮತ್ತು ಅಭಯ್ ಚೌಟಾಲಾ ಅವರ ನೇಮಕವನ್ನು ಐಎಒ  ಅನೂರ್ಜಿತಗೊಳಿಸಿದೆ.

ಸುರೇಶ್ ಕಲ್ಮಾಡಿ, ಅಭಯ್ ಚೌಟಾಲಾ ಅವರನ್ನು ಈ ಹಿಂದೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಆಜೀವ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಸಂಸ್ಥೆಯ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಕ್ರೀಡಾವಲಯದಿಂದಲೂ  ಸಾಕಷ್ಟು ಖಂಡನೆ ವ್ಯಕ್ತವಾಗಿತ್ತು. ಕಲ್ಮಾಡಿ ಮತ್ತು ಅಭಯ್ ಚೌಟಾಲಾ ನೇಮಕದ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಲಾಗಿತ್ತು. ಸ್ವತಃ ಕೇಂದ್ರ ಕ್ರೀಡಾ ಸಚಿವಾಲಯವೇ ಕಲ್ಮಾಡಿ ನೇಮಕವನ್ನು  ನಿರೋಧಿಸಿತ್ತು. ಹೀಗಾಗಿ ಇದೀಗ ಎಚ್ಚೆತ್ತುಕೊಂಡಿರುವ ಐಒಎ ಇವರಿಬ್ಬರ ನೇಮಕವನ್ನು ಅನೂರ್ಜಿತಗೊಳಿಸಿದೆ.

ಅಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಐಒಎ ಕಲ್ಮಾಡಿ ಮತ್ತು ಅಭಯ್ ಚೌಟಾಲಾ ಅವರನ್ನು ಈ ಹಿಂದೆ ಆಜೀವ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಇದೊಂದು ತಾಂತ್ರಿಕ ದೋಷಪೂರಿತ ನಿರ್ಧಾರವೆಂದು ತಿಳಿದಿದ್ದು,  ಇದೀಗ ಈ ನಿರ್ಧಾರವನ್ನು ಅನೂರ್ಜಿತಗೊಳಿಸಲಾಗಿದೆ. ಸಂಸ್ಥೆಗೂ ಸುರೇಶ್ ಕಲ್ಮಾಡಿ ಅವರಿಗೂ ಯಾವುದೇ ರೀತಿಯ ಅಧಿಕೃತ ಸಂಪರ್ಕವಿಲ್ಲ ಎಂದು ಐಒಎ ಸ್ಪಷ್ಟಪಡಿಸಿದೆ.

ಕಾಮನ್ ವೆಲ್ತ್ ಕ್ರೀಡಾಕೂಟ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುರೇಶ್ ಕಲ್ಮಾಡಿ ಅವರನ್ನು ಈ ಹಿಂದೆ ಕಳೆದ ಡಿಸೆಂಬರ್ 27ರಂದು ಚೆನ್ನೈನನಲ್ಲಿ ನಡೆದ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಗೌರವ  ಆಜೀವ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ