ಬಾಕ್ಸಿಂಗ್ (ಸಂಗ್ರಹ ಚಿತ್ರ) 
ಕ್ರೀಡೆ

ಚೀನಾ ಪ್ರೋ ಬಾಕ್ಸಿಂಗ್ ನಲ್ಲೂ ಭಾರತೀಯರದ್ದೇ ಮೇಲುಗೈ!

ವೃತ್ತಿಪರ ಬಾಕ್ಸಿಂಗ್ ನಲ್ಲಿ ಭಾರತದ ಪಾರಮ್ಯ ಮುಂದುವರೆದಿದ್ದು, ಬೀಜಿಂಗ್ ನಲ್ಲಿ ನಡೆಯುತ್ತಿರುವ ಚೀನಾ ಪ್ರೋ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಅಮನ್ ದೀಪ್ ಸಿಂಗ್, ಸಂದೀಪ್, ಬಲ್ಕರ್ ಸಿಂಗ್ ಗೆಲುವ ದಾಖಲಿಸಿ ಹೊಸ ದಾಖಲೆ ಬರೆದಿದ್ದಾರೆ.

ಬೀಜಿಂಗ್: ವೃತ್ತಿಪರ ಬಾಕ್ಸಿಂಗ್ ನಲ್ಲಿ ಭಾರತದ ಪಾರಮ್ಯ ಮುಂದುವರೆದಿದ್ದು, ಬೀಜಿಂಗ್ ನಲ್ಲಿ ನಡೆಯುತ್ತಿರುವ ಚೀನಾ ಪ್ರೋ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಅಮನ್ ದೀಪ್ ಸಿಂಗ್, ಸಂದೀಪ್, ಬಲ್ಕರ್ ಸಿಂಗ್ ಗೆಲುವ  ದಾಖಲಿಸಿ ಹೊಸ ದಾಖಲೆ ಬರೆದಿದ್ದಾರೆ.

ಈ ಹಿಂದೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತರಾಗಿದ್ದ ಭಾರತದ ಅಮನ್ ದೀಪ್ ಸಿಂಗ್ ಅವರು ಚೀನಾ ಬಾಕ್ಸಿಂಗ್ ಪ್ರೋ ಕ್ರೀಡಾಕೂಟದ 56 ಕೆಜಿ ವಿಭಾಗದ ಪಂದ್ಯದಲ್ಲಿ ಥೈಯ್ಲಾಂಡ್ ನ ಅನುಭವಿ ಬಾಕ್ಸರ್  ಪಾಕ್ಪೂಮ್ ಹ್ಯಾಮ್ಮರ್ಯಾಖ್ ರನ್ನು ಸೋಲಿಸಿದ್ದಾರೆ. ಪಾಕ್ಪೂಮ್ ಹ್ಯಾಮ್ಮರ್ಯಾಖ್ ಈ ವರೆಗೂ 27 ವೃತ್ತಿಪರ ಪಂದ್ಯಗಳನ್ನಾಡಿದ್ದು, ಈ ಪೈಕಿ 14 ಜಯ ಮತ್ತು 13 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.

ಅಂತೆಯೇ ಭಾರತದ ಮತ್ತೋರ್ವ ಬಾಕ್ಸರ್ ಅಮನ್ ದೀಪ್ ಅವರು ಕೂಡ ರಾಷ್ಟ್ರ ಮಟ್ಟದ ಚಾಂಪಿಯನ್ ಆಗಿದ್ದು, ಬೀಜಿಂಗ್ ನಲ್ಲಿ ನಡೆದ 66 ಕೆಜಿ ವಿಭಾಗದ ಪಂದ್ಯದಲ್ಲಿ ಸಯನ್ ಸಿರಿಮೊಂಗ್ ಖೊನ್ ವಿರುದ್ಧ 4-0 ಅಂತರದಲ್ಲಿ  ಜಯಗಳಿಸಿದ್ದಾರೆ. ಸಿರಿಮೊಂಗ್ ಖೊನ್ ಕೂಡ ಅನುಭವಿ ಬಾಕ್ಸರ್ ಆಗಿದ್ದು, ಒಟ್ಟು 24 ಪಂದ್ಯಗಳಲ್ಲಿ 12 ಸೋಲು ಹಾಗೂ 12 ಜಯ ಗಳಿಸಿದ್ದಾರೆ. ಮತ್ತೊಂದು ಪಂದ್ಯದಲ್ಲಿ ವೃತ್ತಿಪರ ಬಾಕ್ಸಿಂಗ್ ಗೆ ಪದಾರ್ಪಣೆ ಮಾಡಿರುವ ಭಾರತದ  ಬಲ್ಕರ್ ಸಿಂಗ್ 69 ಕೆಜಿ ವಿಭಾಗದ ಪಂದ್ಯದಲ್ಲಿ ಥಾಯ್ ಮೂಲದ ಚುವೆಚಾನಾ ವಿರುದ್ಧ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಚೀನಾ ಪ್ರೋ ಕ್ರೀಡಾಕೂಟದಲ್ಲಿ ಇಂದು ನಡೆದ ಎಲ್ಲ ಪಂದ್ಯಗಳಲ್ಲೂ ಭಾರತ ಜಯಗಳಿಸಿದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್