ಕ್ರೀಡೆ

ಬಹುಮಾನದ ಘೋಷಣೆ ಕೇವಲ ಮಾಧ್ಯಮಕ್ಕೆ ಮಾತ್ರ ಸೀಮಿತವೇ?: ಹರ್ಯಾಣ ಸರ್ಕಾರಕ್ಕೆ ಸಾಕ್ಷಿ ಮಲಿಕ್ ಪ್ರಶ್ನೆ

Shilpa D

ನವದೆಹಲಿ: 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಪದಕ ಜಯಿಸಿ ದಾಖಲೆ ಬರೆದ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರಿಗೆ ಸರ್ಕಾರ ಘೋಷಣೆ ಮಾಡಿದ್ದ ಭರವಸೆ ಇನ್ನೂ ಈಡೇರಿಲ್ಲ. ಈ ಸಂಬಂಧ ಅವರು ಟ್ವಿಟ್ಟರ್ ನಲ್ಲಿ ಹರ್ಯಾಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕುಸ್ತಿ ಪಟು ಸಾಕ್ಷಿ ಮಲಿಕ್‌ ಅವರಿಗೆ ಹರಿಯಾಣ ಸರ್ಕಾರ 3.5 ಕೋಟಿ ರು. ಬಹುಮಾನ ಘೋಷಿಸಿತ್ತು. ಆದರೆ, ಆದು ಕೇವಲ ಮಾಧ್ಯಮದ ಘೋಷಣೆಯಾಗಿಯೇ ಉಳಿದಿದೆಯೇ? ಪ್ರಶ್ನಿಸಿದ್ದಾರೆ.

ದೇಶಕ್ಕಾಗಿ ಪದಕ ಜಯಿಸಬೇಕೆಂಬ ನನ್ನ ಹೊಣೆಗಾರಿಕೆಯಂತೆ ನಾನು ನಡೆದುಕೊಂಡಿದ್ದೇನೆ. ಆದರೆ, ಹರಿಯಾಣ ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಿದೆಯೇ ಎಂದು ಸಾಕ್ಷಿ ಮಲಿಕ್‌ ಟ್ವೀಟ್‌ ಮಾಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿ ಪಟು ಎಂಬ ಖ್ಯಾತಿಗೆ ಸಾಕ್ಷಿ ಮಲಿಕ್‌ ಪಾತ್ರರಾಗಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದವರಿಗೆ 6 ಕೋಟಿ, ಬೆಳ್ಳಿ ಜಯಿಸಿದವರಿಗೆ 4 ಕೋಟಿ ಹಾಗೂ ಕಂಚು ಜಯಿಸಿದವರಿಗೆ  2.5 ಕೋಟಿ ರು. ಬಹುಮಾನ ನೀಡುವುದಾಗಿ ಹರಿಯಾಣ ಸರ್ಕಾರ ಘೋಷಿಸಿತ್ತು.

SCROLL FOR NEXT