ಬಂಧಿತರಾದ ಟೈಗರ್ ವುಡ್ಸ್ 
ಕ್ರೀಡೆ

ಕುಡಿದು ವಾಹನ ಚಾಲನೆ: ಗಾಲ್ಫರ್ ಟೈಗರ್ ವುಡ್ಸ್ ಬಂಧನ, ಬಿಡುಗಡೆ!

ಅಮೆರಿಕದ ಖ್ಯಾತ ಗಾಲ್ಫ್ ಆಟಗಾರ ಟೈಗರ್‌ವುಡ್ಸ್‌ ರನ್ನು ಕುಡಿದು ವಾಹನ ಚಲಾಯಿಸಿದರೆಂಬ ಆರೋಪದ ಮೇರೆಗೆ ಸೋಮವಾರ ಬಂಧನಕ್ಕೊಳಪಡಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಫ್ಲೋರಿಡಾ: ಅಮೆರಿಕದ ಖ್ಯಾತ ಗಾಲ್ಫ್ ಆಟಗಾರ ಟೈಗರ್‌ವುಡ್ಸ್‌ ರನ್ನು ಕುಡಿದು ವಾಹನ ಚಲಾಯಿಸಿದರೆಂಬ ಆರೋಪದ ಮೇರೆಗೆ ಸೋಮವಾರ ಬಂಧನಕ್ಕೊಳಪಡಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವುಡ್ಸ್ ಸೋಮವಾರ ಮುಂಜಾನೆ ಸುಮಾರು 3 ಗಂಟೆಗೆ ದಕ್ಷಿಣ ಫ್ಲೋರಿಡಾದಲ್ಲಿ  ಪಾನಮತ್ತರಾಗಿ ವಾಹನ ಚಲಾಯಿಸಿದ್ದಾರೆ ಎಂಬ ಆರೋಪದ ಮೇರೆಗೆ ಸ್ಥಳೀಯ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಫ್ಲೋರಿಡಾ ಜುಪಿಟರ್  ನ ಪಾಲಮ್‌ ಬೀಚ್‌ ನ ಕೌಂಟಿ ಜೈಲಿಗೆ ವುಡ್ಸ್‌ರನ್ನು ಬೆಳಗ್ಗೆ 7 ಗಂಟೆಗೆ ಕರೆತರಲಾಗಿತ್ತು ಮತ್ತು ನಂತರ ವುಡ್ಸ್‌ ಅವರನ್ನು ಮುಂಜಾನೆ 10.50ಕ್ಕೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಯಾವುದೇ ದಾಖ​ಲಾತಿಗಳನ್ನು ಪಡೆಯದೇ ವುಡ್ಸ್‌ ರನ್ನು ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಕೂಡ ಪೊಲೀಸರ ವಿರುದ್ಧ ಕೇಳಿಬಂದಿದೆ. ಫ್ಲೋರಿಡಾದ ಜ್ಯೂಪಿಟರ್‌ ಐಸ್‌ ಲ್ಯಾಂಡ್‌ ನಲ್ಲಿ ವುಡ್ಸ್‌ ಅವರ ಮನೆಯಿದ್ದು, ಕಳೆದ  ಏಪ್ರಿಲ್‌ನಲ್ಲಿ ಬೆನ್ನುಹುರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ವುಡ್ಸ್‌ ಸದ್ಯ ಮೈದಾನದಿಂದ ದೂರ ಉಳಿದಿದ್ದಾರೆ.

ಕುಡಿದಿರಲಿಲ್ಲ, ಆದರೆ ವೈದ್ಯಕೀಯ ಔಷಧಿಗಳ ಪ್ರಭಾವವಿತ್ತು
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ವುಡ್ಸ್ ತಾವು ಕಾರು ಚಲಾಯಿಸುವಾಗ ಕುಡಿದಿರಲಿಲ್ಲ. ಆದರೆ ತಮ್ಮ ಬೆನ್ನುಹುರಿ ಚಿಕಿತ್ಸೆಗಾಗಿ ವೈದ್ಯರು ನೀಡಿದ್ದ ಔಷಧಿ ಮಂಪರು ತರಿಸಿತ್ತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel