ಕ್ರೀಡೆ

ಫಿಫಾ ಅಂಡರ್ 17 ಫುಟ್ಬಾಲ್: ಅಮೆರಿಕಾಗೆ 0-3 ಅಂತರದಿಂದ ಮಣಿದ ಭಾರತ

Raghavendra Adiga
ನವದೆಹಲಿ: ಫಿಫಾ ಅಂಡರ್ -17 ವಿಶ್ವಕಪ್ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಬಲ ಎದುರಾಳಿ ಅಮೆರಿಕಾ ವಿರುದ್ಧ ಭಾರತ 3-0 ಅಂತರದಿಂದ ಸೋಲನುಭವಿಸಿದೆ.
ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಎ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ಉತ್ತಮ ಹೋರಾಟ ತೋರಿದರೂ ಸಹ ಅಮೆರಿಕಾದ ಪ್ರತಿರೋಧವನ್ನು ಎದುರಿಸಲಾಗದೆ ಸೋಲಿಗೆ ಶರಣಾದರು.
ಅಮೆರಿಕಾದ ಪರವಾಗಿ 29ನೇ ನಿಮಿಷದಲ್ಲಿ ಜೋಶುವಾ ಸಾರ್ಜೆಂಟ್, 50ನೇ ನಿಮಿಷದಲ್ಲಿ ಕ್ರಿಸ್ಟೋಫರ್ ಡರ್ಕಿನ್ ಮತ್ತು 83ನೇ ನಿಮಿಷದಲ್ಲಿ ಆಂಡ್ರ್ಯೂ ಕಾರ್ಲಟನ್ ಗೋಲನ್ನು ಗಳಿಸಿದ್ದರು. 
ಆಡಿದ ಮೊದಲ ಪಂದ್ಯದಲ್ಲಿಯೇ ಸೋಲನ್ನು ಕಂಡರೂ ಸಹ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಸರಣಿಯಲ್ಲಿ ಭಾಗವಹಿಸಿ ಭಾರತ ಫುಟ್ಬಾಲ್ ತಂಡ ನೂತನ ದಾಖಲೆ ನಿರ್ಮಿಸಿದೆ.
ಫಿಫಾ ವಿಶ್ವಕಪ್ ಚಾಂಪಿಯನ್ ಶಿಪ್‌ನ ಆತಿಥ್ಯ ವಹಿಸಿದ್ದರಿಂದ ಭಾರತ ಆಡಲು ಅರ್ಹತೆ ಪಡೆದಿತ್ತು.
ಇನ್ನೊಂದು ಪಂದ್ಯದಲ್ಲಿ ಮಾಲಿ ದೇಶ ಮತ್ತು ಪರಾಗ್ವೆ  ಎದುರಾಳಿಗಳಾಗಿ ಸೆಣೆಸಿ ಪರಾಗ್ವೆ  3-2ರ ಅಂತರದಿಂದ ಗೆಲುವು ಸಾಧಿಸಿತು. ಪಂದ್ಯದ 12ನೇ ನಿಮಿಷದಲ್ಲಿ ಗೆಲಿಯಾನೋ ಮತ್ತು 17ನೇ ನಿಮಿಷದಲ್ಲಿ ಸ್ಯಾಂಚೆಜ್ ಬಾರಿಸಿದ ಗೋಲಿನಿಂದ ಪರಾಗ್ವೆ ಮುನ್ನಡೆ ಸಾಧಿಸಿತು.
ಇದೇ ವೇಳೆ ಮಾಲಿ 20 ಮತ್ತು 34 ನಿಮಿಷದಲ್ಲಿ ಎರಡು ಗೋಲುಗಳನ್ನು ಬಾರಿಸಿ ಪಂದ್ಯ ಸಮನಾಗುವಂತೆ ಮಾಡಿತು. ತಂಡಗಳು ಸಮಾನ ಹೋರಾಟ ನಡೆಸಿದ್ದಾಗ  55ನೇ ನಿಮಿಷದಲ್ಲಿ ಪರಾಗ್ವೆ  ಯ ರೋಡ್ರಿಗ್ಸ್ ಬಾರಿಸಿದ ಗೋಲಿನಿಂದ ಗೆಲುವು ಪರಾಗ್ವೆ  ಪಾಲಾಯಿತು.
SCROLL FOR NEXT