ಮಕಾವ್ ವಿರುದ್ಧ ಜಯ, ಏಷ್ಯಾಕಪ್ ಫುಟ್ಬಾಲ್ ಟೂರ್ನಿಗೆ ಲಗ್ಗೆ ಇಟ್ಟ ಭಾರತ
ಬೆಂಗಳೂರು: ಏಷ್ಯಾಕಪ್ ಫುಟ್ ವಾಲ್ ಚಾಂಪಿಯನ್ ಶಿಪ್ ಗೆ ಅರ್ಹತೆ ಗಿಟ್ಟಿಸುವ ಭಾರತದ ಕನಸು ನನಸಾಗಿದೆ. ನಿನ್ನೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣ ದಲ್ಲಿ ನಡೆದ ಪಂದ್ಯದಲ್ಲಿ ಮಕಾವ್ ವಿರುದ್ಧ 4–1ರಿಂದ ಜಯ ಸಾಧಿಸಿದ ಭಾರತ 2019ರ ಏಷ್ಯಾಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿತು.
ಚೆಟ್ರಿ ಬಳಗ ಪ್ರಾರಂಭದಿಂದಲೂ ಉತ್ತಮ ಆಟವಾಡಿ ಪಂದ್ಯದ ಮೇಲೆ ಹಿಡಿತ ಸ್ಥಾಪಿಸಿದರು. ಆದರೆ 15ನೇ ನಿಮಿಷದಲ್ಲಿ ಮಕಾವ್ ತಂಡ ಮೊದಲ ಪೆನಾಲ್ಟಿ ಕಾರ್ನರ್ ನ ಅವಕಾಶ ಪಡೆಯಿತಾದರೂ ಗೋಲು ಗಳಿಸಲು ಭಾರತದ ಆತಗಾರರು ಅವಕಾಶ ನೀಡಲಿಲ್ಲ.
ಪಂದ್ಯದ 27ನೇ ನಿಮಿಷದಲ್ಲಿ ಮಿಡ್‌ಫೀಲ್ಡರ್ ರಾವ್ಲಿನ್ ಬೋರ್ಜಿ ಭಾರತದ ಪರವಾಗಿ ಪ್ರಥಮ ಗೋಲು ಬಾರಿಸಿದರು ಅದಾಗಿ 36ನೇ ನಿಮಿಷದಲ್ಲಿ ಮಕಾವ್ ತಂದವೂ ಸಹ ಗೋಲು ಗಳಿಸಿ ಪಂದ್ಯ ಸಮನಾಗುವಂತೆ ಮಾಡಿತ್ತು.
ಮುಂದೆ ಪಂದ್ಯದ 50ನೇ ನಿಮಿಷದಲ್ಲಿ ಸುನೀಲ್ ಚೆಟ್ರಿ ಭಾರತದ ಪವರವಾಗಿ ಎರಡನೇ ಗೋಲು ದಾಖಲಿಸಿದರು.
69ನೇ ನಿಮಿಷದಲ್ಲಿ ಮಕಾವ್ ಡಿಫೆಂಡರ್ ಲಾಮ್ ಕ ಸೆಂಗ್ ಹೋಲಿಚರಣ್ ನರ್ಜರಿ ಒದ್ದ ಚೆಂಡನ್ನು ಗೋಲು ಪೆಟ್ಟಿಗೆಯ ಬಳಿ ತಡೆಯಲು ಮುಂದಾದ ಲಾಮ್ ಅವರ ಕೈಗೆ ತಾಗಿದ್ದ ಚೆಂಡು ಗಮ್ಯ ಸ್ಥಾನವನ್ನು ಮುಟ್ಟಿತು. ಹೀಗೆ ಎದುರಾಳಿ ಆಟಗಾರ ಡಿಫೆಂಡರ್ ಲಾಮ್ ತಾವು ಸ್ವಯಂ ಭಾರತಕ್ಕೆ ಒಂದು ಗೋಲನ್ನು ಉಡುಗೊರೆಯಾಗಿ ನೀಡಿದ್ದರು. ಇನ್ನು ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಜೆಜೆ ಲಾಲ್‌ಪೆಕ್ಲುವಾ ಭಾರತದ ಪರವಾಗಿ ಮತ್ತೆ ಒಂದು ಗೋಲನ್ನು ಗಳಿಸಿಕೊಡುವುದರೊಡನೆ ಭಾರತಕ್ಕೆ ಸುಲಭ ಗೆಲುವು ದೊರಕಿಸಿದರು.
ಏಷ್ಯಾಕಪ್ ನಲ್ಲಿ ಭಾರತದ ಸಾಧನೆ:
ಇದುವರೆಗೆ ನಡೆದ ಏಷ್ಯಾಕಪ್ ಫುಟ್ ಬಾಲ್ ಪಂದ್ಯಾವಳಿಯಲ್ಲಿ ಭಾರತದ ಸಾಧನೆ ನೋಡುವುದಾದರೆ - 1964ರಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ಭಾರತ 1984 ಮತ್ತು 2011ರಲ್ಲಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos