ಕಪಿಲ್ ದೇವ್ 
ಕ್ರೀಡೆ

ಭಾರತ ಕ್ರಿಕೆಟ್ ತಂಡಕ್ಕೆ ತನ್ನದೇ ಖಾಸಗಿ ವಿಮಾನ ಬೇಕು: ಕಪಿಲ್ ದೇವ್ ಇಂಗಿತ

ವರ್ಷವಿಡಿ ವಿರಾಮವಿಲ್ಲದ ಕ್ರಿಕೆಟ್ ನಿಂದಾಗಿ ನಮ್ಮ ಆಟಗಾರರು ಸಾಕಷ್ಟು ದಣಿವು ಅನುಭವಿಸುತ್ತಿದ್ದಾರೆ. ಆಟಗಾರರ ದೂರದ ಪ್ರಯಾಣವನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಸಿಸಿಐ ಖಾಸಗಿ ವಿಮಾನವನ್ನು ಹೊಂದಿರಬೇಕು.

ನವದೆಹಲಿ: ವರ್ಷವಿಡಿ ವಿರಾಮವಿಲ್ಲದ ಕ್ರಿಕೆಟ್ ನಿಂದಾಗಿ ನಮ್ಮ ಆಟಗಾರರು ಸಾಕಷ್ಟು ದಣಿವು ಅನುಭವಿಸುತ್ತಿದ್ದಾರೆ. ಅವರ ದಣಿವು ನಿವಾರಿಸಲು ಕನಿಷ್ಟ  ಪ್ರಯತ್ನವಾಗಿ ದೂರದ ಪ್ರಯಾಣವನ್ನು ತಪ್ಪಿಸುವ ನಿಟ್ಟಿನಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನದೇ ಆದ ಖಾಸಗಿ ವಿಮಾನವನ್ನು ಹೊಂದಿರಬೇಕು ಎಂದು ಬಾರತ ಕ್ರಿಕೆಟ್ ತಂದದ ಮಾಜಿ೮ ನಾಯಕ, ಕಪಿಲ್ ದೇವ್ ಹೇಳಿದ್ದಾರೆ.
ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕಪಿಲ್ ದೇವ್ ಮಾತನಾಡಿ, ಬಿಸಿಸಿಐ ಈಗ ಉತ್ತಮ ಆದಾಯ ಹೊಂದಿದೆ. ಹಾಗಾಗಿ ಖಾಸಗಿ ವಿಮಾನ ಹೊಂದುವುದೇನೂ ಕಠಿಣವಾಗಲಾರದು. ವಿಮಾನ ಖರೀದಿಸುವ ಮೂಲಕ ಸಮಯ ಉಳಿತಾಯದೊಂದಿಗೆ ಆಟಗಾರರ ಜೀವನ ಕೂದ ತುಸು ಆರಾಮ ಆಗುತ್ತದೆ ಎಂದರು.
ಮುಂದುವರಿದು ಭವಿಷ್ಯದಲ್ಲಿ ಆಟಗಾರರು ತಮ್ಮದೇ ಆದ ಸ್ವಂತ ಖಾಸಗಿ ವಿಮಾನದೊಂದಿಗೆ ಆಗಮಿಸುವುದನ್ನು ನೋಡಲು ನಾನು ಇಷ್ಟಪಡುತ್ತೇನೆ ಎಂದು ತಿಳಿಸಿದರು.
ಬಿಸಿಸಿಐ ವಿಮಾನ ಖರೀದಿಸಿದರೆ ಇದರಿಂದ ಆಟಗಾರರಿಗೆ ಅವಶ್ಯಕ ವಿಶ್ರಾಂತಿ ದೊರಕುವುದಷ್ಟೇ ಅಲ್ಲದೆ 20 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಅಭಿಪ್ರಾಯ ಪಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಿಜ್ಜರ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ವಿರುದ್ಧ ಅಮೆರಿಕಾ ಚಾರ್ಜ್‌ಶೀಟ್, 24 ಮಂದಿ ಬಂಧನ..!

ಬಾರೂಯೀಪುರ್ ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ: ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಲಿ..!

ತೈಲ ಹಡಗುಗಳ ಮೇಲಿನ ದಾಳಿಗೆ ಅಮೆರಿಕಾ ಸೇಡು: ಇರಾನ್ ಮೇಲೆ ಭೀಕರ ವೈಮಾನಿಕ ದಾಳಿ, ಪ್ರತೀಕಾರದ ಎಚ್ಚರಿಕೆ ಕೊಟ್ಟ ಟೆಹ್ರಾನ್..!

Greenland ಮೇಲೆ ಮತ್ತೆ ಟ್ರಂಪ್ ಕಣ್ಣು: NATOದಲ್ಲಿ ಶತಕೋಟಿ ಡಾಲರ್ ಶಸ್ತ್ರಾಸ್ತ್ರ ಒಪ್ಪಂದ, ಟರ್ಕಿಗೆ F-35 ಮಾರಾಟಕ್ಕೂ ಒಪ್ಪಿಗೆ..!

ಶಾಸಕರ ಭವನದ ವಾಹನ ದುರ್ಬಳಕೆಗೆ ಬ್ರೇಕ್: ವಿಧಾನಸಭಾ ಕಾರ್ಯಾಲಯದಿಂದ ಕಠಿಣ ರೂಲ್ಸ್; ಬಳಸಿದ ವಾಹನದ ಬಾಡಿಗೆ ನೇರವಾಗಿ ಶಾಸಕರ ವೇತನದಿಂದಲೇ ವಸೂಲಿ..!